ಬಂಟ್ವಾಳ ಪೇಟೆ ನೀರು ಏರಿಕೆ : ಸ್ಥಳಾಂತರಕ್ಕೆ ಕಾರ್ಯಾಚರಣೆ : ಪೂಜಾರಿ ಮನೆಗೆ ಜಲದಿಗ್ಬಂಧನ

bantwala pete
ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮನೆ ಸಮೀಪ ಪ್ರವಾಹ ಆವರಿಸಿರುವುದು.
Published on

ಬಂಟ್ವಾಳ: ಸಂಜೆಯ ವೇಳೆ ಬಂಟ್ವಾಳ ಪೇಟೆ ಪರಿಸರದಲ್ಲಿ ನೆರೆ ನೀರು ಮಟ್ಟ ಏರಿಕೆಯಾಗಿದೆ. ನೆರೆಪೀಡಿತ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಚುರುಗೊಳಿಸಲಾಯಿತು.

ಮುಳುಗಿದ ಸ್ಮಶಾನ: ಬಡ್ಡಕಟ್ಟೆ ರಸ್ತೆಯ ಬಳಿಯೇ ಇರುವ ಹಿಂದು ರುದ್ರಭೂಮಿ ಸಂಪೂರ್ಣ ಜಲಾವೃತಗೊಂಡಿತು. ನೇತ್ರಾವತಿ ನದಿಯ ನೀರು ಬಡ್ಡಕಟ್ಟೆ ನಿತ್ಯಾನಂದ ಮಂದಿರದ ಮುಂಭಾಗದಿಂದಲೇ ರಸ್ತೆಯಲ್ಲಿ ಹರಿಯತೊಡಗಿತು.

ದ್ವೀಪವಾದ ಪೂಜಾರಿ ಮನೆ:

ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಬಂಟ್ವಾಳದ ಮನೆಯ ಸುತ್ತ ನೀರು ಆವರಿಸಿಕೊಂಡು ದ್ವೀಪದಂತಾಯಿತು. ರಾತ್ರಿವರೆಗೂ ಜನಾರ್ದನ ಪೂಜಾರಿ ಹಾಗೂ ಅವರ ಪತ್ನಿ ಮನೆಯಲ್ಲಿಯೇ ಉಳಿದಿದ್ದರು. ತಾಲೂಕಾಡಳಿತದಿಂದ ದೋಣಿಯ ಮೂಲಕ ಅವರನ್ನು ಕರೆ ತರಲು ವ್ಯವಸ್ಥೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net