ನೀರಿನ ಸಂರಕ್ಷಣೆ ಅಗತ್ಯ

ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಲ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರಾಚಾರ್ಯ ಡಾ.ಕೆ.ಖಾದರ್ ಬಾಷಾ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಚನ್ನಬಸವ, ಉಪನ್ಯಾಸಕರಾದ ಡಾ.ವೆಂಕಟರಮಣ, ರಾಜೇಶ ಇದ್ದರು.
ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಲ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರಾಚಾರ್ಯ ಡಾ.ಕೆ.ಖಾದರ್ ಬಾಷಾ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಚನ್ನಬಸವ, ಉಪನ್ಯಾಸಕರಾದ ಡಾ.ವೆಂಕಟರಮಣ, ರಾಜೇಶ ಇದ್ದರು.
Published on

ಸಿಂಧನೂರು: ಅಮೂಲ್ಯ ವಸ್ತುಗಳಲ್ಲಿ ನೀರು ಕೂಡ ಒಂದಾಗಿದ್ದು, ಮಿತವಾಗಿ ಬಳಸಬೇಕು ಎಂದು ಪ್ರಾಚಾರ್ಯ ಡಾ.ಕೆ.ಖಾದರ್ ಬಾಷಾ ಹೇಳಿದರು.

ವಿಶ್ವ ಜಲ ದಿನದ ನಿಮಿತ್ತ ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಲ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಗತ್ತಿನ ಅನೇಕ ಭಾಗಗಳಲ್ಲಿ ಇಂದಿಗೂ ಕುಡಿವ ನೀರಿನ ಕೊರತೆ ಇದೆ. ಕುಡಿವ ನೀರಿನಿಂದ ಸಾರ್ವಜನಿಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ತಡೆಯಲು ನೀರಿನ ಸುಸ್ಥಿರ ಬಳಕೆ, ಮಳೆ ನೀರು ಸಂಗ್ರಹ ಮತ್ತು ನೀರು ಪೋಲು ತಪ್ಪಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು. ಪರಿಸರ ಸಮತೋಲನಕ್ಕೆ ನೀರಿನ ಸಂರಕ್ಷಣೆ ಅಗತ್ಯ ಎಂದು ತಿಳಿಸಿದರು.

ಸಾಂಸ್ಕೃತಿಕ ವಿಭಾಗದ ಸಂಚಾಲಕ ಮೌಲಾಸಾಬ್ ಮಾತನಾಡಿ, 2025ರ ವಿಶ್ವ ಜಲ ದಿನದ ಥೀಮ್ ’ಹಿಮನದಿ ಸಂರಕ್ಷಣೆ‘ ಹಿಮನದಿಗಳಿಂದ ಕರಗುವ ನೀರು ಕುಡಿಯಲು, ಕೃಷಿ, ಕೈಗಾರಿಕೆ, ಶುದ್ಧ ಇಂಧನ ಉತ್ಪಾದನೆ ಮತ್ತು ಆರೋಗ್ಯಕರ ಪರಿಸರಕ್ಕೆ ಪೂರಕವಾಗಿವೆ. ಆದ್ದರಿಂದ ನೀರನ್ನು ಮಿತವಾಗಿ ಬಳಸಿ ಎಂದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಚನ್ನಬಸವ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕರಾದ ಡಾ.ವೆಂಕಟರಮಣ, ರಾಜೇಶ, ಗಂಗಾಬಾಯಿ, ಮಹಾದೇವ, ಸುಭಾಷ, ವೀರೇಶ, ಭೀಮಶಂಕರ, ಚನ್ನಬಸಮ್ಮ, ರಾಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net