ಕಲ್ಚರ್ಪೆ ತ್ಯಾಜ್ಯ ನೀರು ಪಯಸ್ವಿನಿಯ ಒಡಲಿಗೆ

thyaja
ಆಲೆಟ್ಟಿ ಗ್ರಾಮದ ಕಲ್ಚರ್ಪೆಯಲ್ಲಿ ಶೇಖರಣೆ ಮಾಡಿದ ಘನತ್ಯಾಜ್ಯದ ರಾಶಿ.
Published on

ಸುಳ್ಯ: ನಗರ ಪಂಚಾಯಿತಿಯಿಂದ ಆಲೆಟ್ಟಿ ಗ್ರಾಮದ ಕಲ್ಚರ್ಪೆಯಲ್ಲಿ ಶೇಖರಣೆ ಮಾಡಿದ ಘನತ್ಯಾಜ್ಯದ ರಾಶಿಗೆ ಅರಣ್ಯ ಪ್ರದೇಶದಿಂದ ಹರಿದು ಬರುವ ನೀರು ಸೇರುತ್ತಿದ್ದು ಅಲ್ಲಿಂದ ಹರಿದ ಕೊಚ್ಚೆ ನೀರು ಸುಳ್ಯದ ಜೀವನದಿ ಪಯಸ್ವಿನಿಯ ಒಡಲು ಸೇರಿ ಮಲಿನವಾಗುತ್ತಿದೆ.

ನಾಗಪಟ್ಟಣದಲ್ಲಿ ಕುಡಿಯುವ ನೀರು ಸಂಗ್ರಹಿಸುವ ಉದ್ದೇಶದಿಂದ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇಡೀ ಸುಳ್ಯ ನಗರ ವ್ಯಾಪ್ತಿಯ ಜನರಿಗೆ ಕುಡಿಯಲು ನೀರು ಇಲ್ಲಿಂದ ಸರಬರಾಜು ಮಾಡಲಾಗುತ್ತಿದೆ. ಕಲ್ಚರ್ಪೆಯ ತ್ಯಾಜ್ಯದೊಂದಿಗೆ ಹರಿದು ಬರುವ ಕೊಳಚೆ ನೀರು ನದಿಗೆ ಸೇರುವುದರಿಂದ ಅದೇ ನೀರನ್ನು ಜನ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಸಮಸ್ಯೆ ಬಗ್ಗೆ ಹಲವಾರು ಬಾರಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ, ಪರಿಸರಕ್ಕೆ ಭೇಟಿ ನೀಡಿ ಭರವಸೆ ನೀಡಿರುವುದಲ್ಲದೆ ಯಾವುದೇ ಕ್ರಮ ಜರುಗಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ನಪಂ ಮಾಜಿ ಸದಸ್ಯ ಗೋಕುಲ್‌ದಾಸ್ ಖಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net