ಮುಂದುವರಿದ ಹೆದ್ದಾರಿ ಸಂಚಾರ ಸಮಸ್ಯೆ

mannu

ಬೆಳ್ತಂಗಡಿ: ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ಬೆಳ್ತಂಗಡಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಹೆದ್ದಾರಿ ಸಂಚಾರ ಸಮಸ್ಯೆ ಮುಂದುವರಿಯಿತು.
ಮದ್ದಡ್ಕ, ಬೆಳ್ತಂಗಡಿ, ಉಜಿರೆ, ಮುಂಡಾಜೆ, ಚಿಬಿದ್ರೆ, ಚಾರ್ಮಾಡಿ ಮೊದಲಾದ ಸ್ಥಳಗಳಲ್ಲಿ ಅಭಿವೃದ್ಧಿಗಾಗಿ ರಸ್ತೆ ಅಗೆದು ಹಾಕಿ ಕೆಲವು ಕಡೆ ಮಾತ್ರ ಡಾಂಬರೀರಣ ನಡೆದಿದೆ.

ಉಳಿದೆಡೆ ರಸ್ತೆ ಅಗೆದು ಜಲ್ಲಿ ಹಾಕಲಾಗಿದ್ದರೆ ಇನ್ನು ಕೆಲವೆಡೆ ಮಣ್ಣಿನ ರಸ್ತೆ ಇದೆ. ಇಲ್ಲಿ ವಾಹನ ಸಂಚಾರಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗಿದೆ ದಿನಂಪ್ರತಿ ಸಾವಿರಾರು ವಾಹನ ಸಂಚಾರ ನಡೆಸುವ ಹೆದ್ದಾರಿ ರಸ್ತೆಯ ಈ ಸ್ಥಿತಿಗೆ ಚಾಲಕರು ಹಿಡಿಶಾಪ ಹಾಕುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಇಲ್ಲಿ ಸಂಚರಿಸಲು ಪಾಡು ಪಡುವಂತಾಗಿದೆ. ಮಣ್ಣು ಅಗೆದು ಹಾಕಲಾಗಿರುವಲ್ಲಿ ಪಾದಾಚಾರಿಗಳಿಗೆ ಕೆಸರಿನ ಸಿಂಚನ ಸಾಮಾನ್ಯವಾಗಿದೆ. ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…