ತೋಟದ ಮನೆಯಲ್ಲಿ ಯೋಧ ಸ್ವಯಂ ಕ್ವಾರಂಟೈನ್

17 svr 02
Published on

ಸವಣೂರ: ರಜೆಗೆಂದು ಸ್ವಗ್ರಾಮಕ್ಕೆ ಆಗಮಿಸಿದ ಯೋಧರೊಬ್ಬರು ಕರೊನಾ ಹಿನ್ನೆಲೆಯಲ್ಲಿ ಊರ ಹೊರವಲಯದ ತೋಟದ ಮನೆಯಲ್ಲಿ ಒಂದು ವಾರದಿಂದ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದು, ಗ್ರಾಮಸ್ಥರು, ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೆಹಲಿ ಸೇನಾ ಮುಖ್ಯಾಲಯ ಕಚೇರಿಯಲ್ಲಿ ಸೇನಾ ಹವಾಲ್ದಾರ್ ಆಗಿ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹುರಳೀಕುಪ್ಪಿಯ ಮಾಲತೇಶ ನಾಗಪ್ಪ ತಿಪ್ಪಕ್ಕನವರ ಅವರು ಜೂನ್ 18ರವರೆಗೆ ರಜೆ ಪಡೆದು ಹುಟ್ಟೂರಿಗೆ ಆಗಮಿಸಿದ್ದಾರೆ. ಕರೊನಾ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ಎಂಬುದನ್ನು ಖಚಿತಪಡಿಸಿಕೊಂಡ ನಂತರ ರೈಲಿನ ಮೂಲಕ ತವರಿಗೆ ಆಗಮಿಸಿದ್ದರು. ಆದರೆ, ಗ್ರಾಮಸ್ಥರು, ಕುಟುಂಬಸ್ಥರ ಆರೋಗ್ಯ ದೃಷ್ಟಿಯಿಂದ ಒಂದು ವಾರಕಾಲ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಇವರಿಗೆ ಗ್ರಾಮದ ಶಶಿಧರ ಯಲಿಗಾರ ಅವರು ತಮ್ಮ ತೋಟದ ಮನೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದಾರೆ. ಯೋಧನ ಈ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಯೋಧ ಮಾಲತೇಶ ಅವರು ಸ್ವಯಂ ಹೋಂ ಕ್ವಾರಂಟೈನ್ ಆಗಿದ್ದರಿಂದ ಗ್ರಾಮದಲ್ಲಿ ಅವರ ಬಗ್ಗೆ ಇದ್ದ ಗೌರವವನ್ನು ಹೆಚ್ಚಿಸಿದೆ. ಪ್ರತಿಬಾರಿ ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದಾಗ ಸದಾ ಸಾಮಾಜಿಕ ಕಾರ್ಯದಲ್ಲಿ ತೊಡಗುವ ಮೂಲಕ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.| ಭೋಜರಾಜ ಲಮಾಣಿ, ಹುರಳೀಕುಪ್ಪಿ ಗ್ರಾಪಂ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net