

ಚಿಂತಾಮಣಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತಯಾಚನೆಗೆ ಬಂದಾಗ ಹಲವಾರು ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ ಕಂಡು ಅದನ್ನು ನಿವಾರಿಸುವ ಭರವಸೆ ನೀಡಿದ್ದೆ. ಅದರಂತೆ ಚುನಾವಣೆ ಗೆದ್ದ ನಂತರ ಹಲವಾರು ಅಭಿವೃದ್ಧಿ ಕೆಲಸದಲ್ಲಿ ಜಾರಿಯಾಗಿದೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯಲ್ಲಿ 13 ಕೋಟಿ ರೂ. ವೆಚ್ಚದ ಅಂಗನವಾಡಿ ಕಟ್ಟಡ, ಶಾಲಾ ಕೊಠಡಿ, ಶುದ್ಧ ಕುಡಿಯುವ ನೀರಿನ ಟಕ, ರಸ್ತೆ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷಿ$್ಮ ಹಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಸದರಿ ಯೋಜನೆಗಳು ನಿಲ್ಲುವುದಿಲ್ಲ. ಶ್ರೀದಲ್ಲಿಯೇ ಎರಡು ಗ್ಯಾರಂಟಿಗಳ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದರು.
ನಗರ ಪ್ರದೇಶಗಳಿಗೆ ಮಾತ್ರ ಒಳಚರಂಡಿ ವ್ಯವಸ್ಥೆ ಇದ್ದು, ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಒಳಚರಂಡಿ ವ್ಯವಸ್ಥೆ ಮಾಡಲು ನಿರ್ಧರಿಸಿ, ಕರಿಯಪಲ್ಲಿ ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ ಮಾಡಿಸಲಾಗಿದೆ. ತ್ಯಾಜ್ಯ ಸಂಗ್ರಹಣೆಗೆ ವ್ಯವಸ್ಥೆ ಮಾಡಲು ಹಣದ ಕೊರತೆಯಿಂದ ಮುಂದಿನ ದಿನಗಳಲ್ಲಿ ಮಾಡಿಸೋಣ ಎಂದುಕೊಂಡಿದ್ದೆ, ರಸ್ತೆಗಳಿಗೂ ಹಣ ಹಾಕಿಸಿದ್ದೆ, ಆದರೆ, 2013ರ ಚುನಾವಣೆಯಲ್ಲಿ ಅಭಿವೃದ್ಧಿ ಮಾಡಿ ಸಾಕಾಗಿದ್ದೀರಾ ರೆಸ್ಟ್ ತಗೊಳ್ಳಿ ಎಂದರು. ಆಗ ಎಲ್ಲವೂ ನಿಂತು ಹೋಯಿತು ಎಂದು ಹಲವಾರ ಉದಾಹರಣೆಗಳ ಸಹಿತ ಸಚಿವರು ವಿವರಿಸಿದರು.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅನುದಾನಗಳ ಹಂಚಿಕೆ ಜವಾಬ್ದಾರಿ ನನಗೆ ಬಂದಿದ್ದರಿಂದ ಎಲ್ಲ ಶಾಲೆಗಳಲ್ಲಿ ಸ್ಮಾರ್ಟ್ಕ್ಲಾಸ್ ರೂಂಗಳ ನಿರ್ಮಾಣಕ್ಕೆ ಆದ್ಯತೆ ನೀಡಿರುವುದಾಗಿ ಹೇಳಿದ ಸಚಿವರು, ಸಿದ್ದಿಮಠ ಗ್ರಾಮದಲ್ಲಿ ಮತ ಯಾಚನೆಗೆ ಬಂದಾಗ ನೀಡಿದ್ದ ಭರವಸೆಯಂತೆ ದರ್ಗಾ ಅಭಿವೃದ್ದಿ, ಸಮುದಾಯ ಭವನ, ಚರಂಡಿ ಮತ್ತು ನೀರಿನ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.
ಕಾಗತಿ ಗ್ರಾಮದಲ್ಲಿ ಗ್ರಂಥಾಲಯದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ, ದೊಡ್ಡಗಂಜೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಕೊಠಡಿಗಳು, ಪಣಸಚೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎರಡು ತರಗತಿ ಮತ್ತು ದೊಡ್ಡಬೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಜೋಡಿ ಎರಡು ತರಗತಿ ಕೊಠಡಿಗಳ ಉದ್ಘಾಟನೆ, ಸಿದ್ದಿಮಠ, ಗೊಲ್ಲಹಳ್ಳಿ, ಚಿಕ್ಕಪುರ, ರಾಂಪುರ (ಚಟ್ಲಪಲ್ಲಿ ಗಡ್ಡ) ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಟಕ ಉದ್ಘಾಟನೆ ನೆರವೇರಿಸಿದ್ದಾಗಿ ಸಚಿವರು ತಿಳಿಸಿದರು.
ಕೋಲಾರ ಜಿಲ್ಲೆಯ ಬಂಗಾರಪೇಟೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಿಂದ ಗೌರಿಬಿದನೂರು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ, ತಾಲೂಕಿನ ಕಾಚಹಳ್ಳಿ ಹತ್ತಿರ ಉದ್ದೇಶಿತ ರೈತ ಸಂಪರ್ಕ ಕೇಂದ್ರ ಕಟ್ಟಡ ಕಾಮಗಾರಿಗೆ ಭೂಮಿಪೂಜೆ, ಚಿಂತಾಮಣಿ ತಾಲೂಕಿನಿಂದ ಕೋಲಾರ ತಾಲೂಕಿನ ಗಡಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಭೂಮಿಪೂಜೆ ನೆರವೇರಿಸಿದರು.
ತಹಸೀಲ್ದಾರ್ ಸುದರ್ಶನ್ ಯಾದವ್, ಉಪತಹಸೀಲ್ದಾರ್ ರಾಜೇಂದ್ರ, ತಾಪಂ ಇಒ ಆನಂದ್, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಎಇಇ ನಾಗರಾಜ್, ಬಿಇಒ ವಿ.ಉಮಾದೇವಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಜಂಗಮಸೀಗೆಹಳ್ಳಿ ಮುನಿನಾರಾಯಣಪ್ಪ, ಜಿಪಂ ಮಾಜಿ ಸದಸ್ಯ ಈರುಳ್ಳಿ ಶಿವಣ್ಣ, ಕೃಷಿಕ ಸಮಾಜದ ಅಧ್ಯಕ್ಷ ಜಯರಾಮ ರೆಡ್ಡಿ, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ವಿವಿಧ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.
ನೀರಿನ ಟಕ ಮಾಹಿತಿ ನೀಡಿದ ಸಚಿವ
ಗ್ರಾಮಗಳಲ್ಲಿ ್ಲೋರೈಡ್ ಅಂಶ ಹೆಚ್ಚಿರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಟಕಗಳ ಸ್ಥಾಪಿಸಲು ಸರ್ಕಾರ ಮುಂದಾಗಿದೆ. 2013ರಲ್ಲಿ ಎಷ್ಟು ಶುದ್ಧ ನೀರಿನ ಟಕಗಳು ಮಂಜೂರಾದವು, ನಂತರ ಎಷ್ಟು ಮಂಜೂರಾಗಿವೆ, ಎಷ್ಟು ಕೆಲಸ ಮಾಡುತ್ತಿವೆ ಎಂಬುದರ ಮಾಹಿತಿ ಕಲೆ ಹಾಕಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ಕೇವಲ 60ರಿಂದ 65 ಮಾತ್ರ ಆಗಿದೆ. ಅಂದರೆ ಎಷ್ಟರಮಟ್ಟಿಗೆ ಪ್ರಯತ್ನ ಇತ್ತು ಎಂದು ಡಾ. ಎಂ.ಸಿ. ಸುಧಾಕರ್ ವಿವರಿಸಿದರು. ಈಗ ಎಷ್ಟು ಶುದ್ದ ನೀರಿನ ಟಕಗಳಿಗೆ ಚಾಲನೆ ಕೊಡಲಾಗಿದೆ ಎನ್ನುವುದನ್ನು ಸಂಪೂರ್ಣ ತಿಳಿಸುತ್ತೇನೆ ಹೇಳಿದರು.