

ರಾಮನಗರ : ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ಬಿಡದಿಯ ವಂಡರ್ ಲಾ ಹಾಲಿಡೇಸ್‌ನಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಅಂಗವಾಗಿ ಡಿ.21ರಿಂದ ಪಾಸ್ ಕೊಡುಗೆ ಹಾಗೂ ಅನೇಕ ಥೀಮ್ ಚಟುವಟಿಕೆ ಘೋಷಿಸಿದೆ.
ಡಿ.10 ರಿಂದ ಜ.5 ನಡುವೆ ಯಾವುದೇ ದಿನದಲ್ಲಾದರೂ ಅತಿಥಿಗಳು ಈ ಪಾಸ್‌ಗಳನ್ನು ಬುಕ್ ಮಾಡಿ, ಡಿ.21ರಿಂದ ಜ.5ರ ನಡುವೆ ಭೇಟಿ ನೀಡಬಹುದು. ಈ ಪಾಸ್‌ಗಳ ಮೇಲೆ ಹಾಗೂ ಆಹಾರ ಕಾಂಬೋ ಪ್ಯಾಕೇಜಗಳ ಮೇಲೆ ಶೇ.30 ರಿಯಾಯಿತಿ ಒದಗಿಸಲಾಗುತ್ತಿದೆ. ಕೊಡುಗೆಗಳು ಆನ್‌ಲೈನ್ ಬುಕ್ಕಿಂಗ್‌ಗಳಿಗೆ ಮಾತ್ರ ಲಭ್ಯವಿರುತ್ತದೆ.
ಅದರ ಜತೆಗೆ ಐತಿಹಾಸಿಕ ಸ್ಕೈ ವೀಲ್ ಮೇಲೆ ವಿಶೇಷವಾದ ಸೆಲೆಬ್ರೆಟೊರಿ ಸ್ಕೈ-ಡೈನ್ ಆಯ್ಕೆಯನ್ನೂ ನೀಡುತ್ತಿದ್ದು, ಒಂದು ಜೋಡಿಗೆ 349 ರೂ.ಗಳನ್ನು ನಿಗಧಿಪಡಿಸಿದೆ. ಈ ಕೊಡುಗೆ ಡಿ.21ರಿಂದ ಜ.1ರ ವರೆಗೆ ಲಭ್ಯವಿದೆ ಎಂದು ವಂಡರ್ ಲಾ ಹಾಲಿಡೇಸ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ.ಚಿಟ್ಟಿಲಪಿಳ್ಳಿ ತಿಳಿಸಿದರು.
ಹಬ್ಬದ ಋತುವಿನಲ್ಲಿ ಬೆಂಗಳೂರಿನ ವಂಡರ್ ಲಾಗೆ ಕ್ರಿಸ್‌ಮಸ್ ಹಾಗೂ ಹೊಸವರ್ಷದ
ಮಾಯೆಯನ್ನು ಪಾರ್ಕ್‌ಗೆ ತರುತ್ತಿದೆ. ಕೌತುಕಮಯವಾದ ಕೊಡುಗೆಗಳು, ಮನಮೋಹಕ ಅಲಂಕಾರಗಳು ಹಾಗೂ ಕುಟುಂಬದವರು ಮತ್ತು ಸ್ನೇಹಿತರಿಗಾಗಿ ಅನೇಕ ಚಟುವಟಿಕೆಗಳನ್ನು ವಂಡರ್ ಲಾ ಒದಗಿಸುತ್ತಿದೆ. ಇದರ ಸದುಪಯೋಗಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.
ಆನ್‌ಲೈನ್ ಪೋರ್ಟಲ್ ಠಿಠಿ://ಚಿಟಟಜ್ಞಿಜ.ಡಿಟ್ಞಛ್ಟ್ಝಿ.್ಚಟಞ/ ಮೂಲಕ ತಮ್ಮ ಪ್ರವೇಶ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಬಿಡದಿಯ ಪಾರ್ಕ್ ಸಂಖ್ಯೆ +91 80372 30333, +91 9945557777 ಅನ್ನು ಸಂಪರ್ಕಿಸಬಹುದಾಗಿದೆ.