ಅಳ್ನಾವರ ತಾಲೂಕಿನ ಶಿವನಗರ ಶಾಲಾ ಕಟ್ಟಡದ ಗೋಡೆ ಕುಸಿತ

27 Dwd 5 ALNAVAR SCHOOL
Published on

ಧಾರವಾಡ: ನಿರಂತರ ಮಳೆಯಿಂದಾಗಿ ಅಳ್ನಾವರ ತಾಲೂಕಿನ ಶಿವನಗರ ಪ್ರಾಥಮಿಕ ಶಾಲೆಯ ಗೋಡೆ ಗುರುವಾರ ಬೆಳಗ್ಗೆ ಕುಸಿದಿದೆ.

ಕೊಠಡಿ ಶಿಥಿಲವಾಗಿದ್ದರಿಂದ ಶಿಕ್ಷಣ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಶಿವನಗರದ ದುಂದು ಗೌಳಿ ಅವರ ಖಾಸಗಿ ಕಟ್ಟಡಕ್ಕೆ ಶಾಲೆ ಸ್ಥಳಾಂತರಿಸಲು ನಿರ್ಧರಿಸಿತ್ತು.

ಹೀಗಾಗಿ ಜು. 26ರಂದು ಮಕ್ಕಳಿಗೆ ರಜೆ ನೀಡಲಾಗಿತ್ತು. ಮುಂಜಾಗ್ರತೆ ವಹಿಸಿ ಶಾಲೆಯ ಕಾರ್ಯಚಟುವಟಿಕೆಯನ್ನು ಸ್ಥಳಾಂತರ ಮಾಡಿದ್ದರಿಂದ ಅವಘಡ ತಪ್ಪಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಆರ್. ಸದಲಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net