ಸಂಧಿವಾತದ ಸಮಸ್ಯೆ ಅರಿವಿಗೆ ವಾಕಥಾನ್

ಸಂಧಿವಾತದ ಸಮಸ್ಯೆ ಅರಿವಿಗೆ ವಾಕಥಾನ್
Published on

ಹಾಸನ: ನಗರದ ಇಂಡಿಯಾನ ಆಸ್ಪತ್ರೆ ವತಿಯಿಂದ ನಗರದ ಜನತೆಗೆ ಸಂಧಿವಾತದ ಸಮಸ್ಯೆಗಳ ಕುರಿತು ಅರಿವು ಮೂಡಿಸಲು ಇತ್ತೀಚೆಗೆ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು.

ಜಾಥಾ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಅಕಿಲ್ ಪಾಷ, ಮನುಷ್ಯನ ಆರೋಗ್ಯ ವೃದ್ಧಿಯಾಗಬೇಕೆಂದರೆ ನಡುಗೆ, ವ್ಯಾಯಾಮ ಪ್ರಮುಖವಾಗಿದೆ ಎಂದರು.

ಡಾ.ನಯಿಮ್ ಮಾತನಾಡಿ, ಸಂಧಿವಾತ ಸಮಸ್ಯೆ ಇತ್ತೀಚಿನ ಜೀವನ ಶೈಲಿ ಮತ್ತು ಆಹಾರ ಸಮತೋಲನ ಇಲ್ಲದೆ ಚಿಕ್ಕ ವಯಸ್ಸಿನಿಂದ ಪ್ರಾರಂಭವಾಗುತ್ತಿದೆ. ವ್ಯಾಯಾಮ ಮತ್ತು ಸಮತೋಲನ ಆಹಾರ ಸರಿಯಾದ ಸಮಯಕ್ಕೆ ವೈದ್ಯರ ಸಲಹೆ ಅತಿ ಮುಖ್ಯ ಎಂದರು. ಡಾ.ಅನೂಪ್, ಡಾ.ಶ್ರೀರಂಗ, ಡಾ.ಕಿರಣ್, ಜನತಾ ಸ್ಕೂಲ್ ನರ್ಸಿಂಗ್‌ನ ಪ್ರಾಂಶುಪಾಲ ಎನ್.ಡಿ.ಅರುಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net