ವಚನಗಳ ಸಾರ ಅರಿಯುವುದು ಮುಖ್ಯ

010203
Published on

ಬೆಳಗಾವಿ: ವಚನ ಸಾಹಿತ್ಯ ಓದುವುದು ಮತ್ತು ಬಾಯಿಪಾಠ ಮಾಡಿ ಹಾಡುವುದು ಮುಖ್ಯವಲ್ಲ. ಅವುಗಳಲ್ಲಿನ ಸಾರ, ತತ್ತ್ವ, ಸಂದೇಶ ಅನುಸರಿಸುವುದು ಮುಖ್ಯ. ಹಾಗಾದಾಗ ಮಾತ್ರ ಸಾಹಿತ್ಯ ತನ್ನ ಮೌಲ್ಯ ಹೆಚ್ಚಿಸಿಕೊಳ್ಳುತ್ತದೆ ಎಂದು ನಿವೃತ್ತ ನ್ಯಾಯಾಧೀಶ ಎ.ಎಸ್. ಪಾಚ್ಚಾಪುರ ಹೇಳಿದರು.

ಶ್ರೀನಗರ ಪ್ರೊ.ಎ.ಕೆ. ಕಮತೆ ನಿವಾಸದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬೆಳಗಾವಿಯ ನಿತ್ಯಮುಕ್ತ ಸಾಯಿ ಪ್ರತಿಷ್ಠಾನದ 5ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯಾಧೀಶನಾಗಿ ಆಸ್ತಿ ವ್ಯಾಜ್ಯ ಪರಿಹರಿಸಿದ್ದೇನೆ. ಇವೆಲ್ಲ ಕೇವಲ ರಕ್ತ ಸಂಬಂಧಿಗಳಲ್ಲಿರುವ ತಕರಾರಿನ ಪ್ರಕರಣಗಳು.

ಥ ಪರಿಸ್ಥಿತಿಯಲ್ಲಿ ಅಕ್ಕ ನೀಡಿದ ಮೊತ್ತದ ಖಚಿತ ಠೇವಣಿಯಿಂದ ಬರುವ ಮೊತ್ತವನ್ನು ಪ್ರತಿಷ್ಠಾನದ ಮೂಲಕ ಸಮಾಜಮುಖಿ ಕೆಲಸಗಳಿಗೆ ಮೀಸಲಿಟ್ಟಿರುವುದು ಶ್ಲಾಘನೀಯ ಮತ್ತು ಮನಸ್ಸಿಗೆ ನೆಮ್ಮದಿ ತರುವ ಸಂಗತಿ ಎಂದರು.

ಪ್ರತಿಷ್ಠಾನದ ಕಾರ್ಯದರ್ಶಿ ಯ.ರು.ಪಾಟೀಲ ಮಾತನಾಡಿ, ದಿ.ಬಸವಣ್ಣೆವ್ವ ತೋಟಗಿ ಅವರು 80 ಲಕ್ಷ ರೂ. ಈ ಪ್ರತಿಷ್ಠಾನಕ್ಕೆ ನೀಡಿದ್ದು, ಈ ಮೊತ್ತದಿಂದ ಬರುವ ಬಡ್ಡಿ ಹಣದಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದತ್ತು ತೆಗೆದುಕೊಂಡು ಡೆಸ್ಕ್, ಪೀಠೋಪಕರಣಗಳು, ಸಮವಸ್ತ್ರ ಮುಂತಾದ ಸೌಲಭ್ಯ ನೀಡಲಾಗುತ್ತಿದೆ. ವಿದ್ಯಾರ್ಥಿ ವೇತನ ಹಾಗೂ ಮುಖ್ಯಮಂತ್ರಿ ಪ್ರಾಕೃತಿಕ ವಿಕೋಪಗಳ ಪರಿಹಾರ ನಿಧಿಗೂ ಹಣ ನೀಡಲಾಗುತ್ತಿದೆ. ಈವರೆಗೆ 12 ಲಕ್ಷ ರೂ. ವೆಚ್ಚವಾಗಿದೆ ಎಂದರು.

ಸಾಹಿತಿ ಡಾ.ಬಸವರಾಜ ಜಗಜಂಪಿ ಅವರು ‘ದೇವರ ದಾಸಿಮಯ್ಯ ಮತ್ತು ದುಗ್ಗಳೆ’ ಹಾಗೂ ಧಾರವಾಡದ ವಿಶ್ರಾಂತ ಪ್ರಾಚಾರ್ಯ ಪ್ರೊ.ಜಿ.ಎ.ತಿಗಡಿ ಅವರು ‘ವಚನಕಾರ್ತಿಯರಾದ ಸಂಕವ್ವೆ ಮತ್ತು ಸತ್ಯಕ್ಕನರ’ ಕುರಿತು ಉಪನ್ಯಾಸ ನೀಡಿದರು. ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎ.ಕೆ.ಕಮತೆ ಅಧ್ಯಕ್ಷತೆ ವಹಿಸಿದ್ದರು. ವಿ.ಬಿ.ದೊಡ್ಡಮನಿ ನಿರೂಪಿಸಿದರು. ಪ್ರತಿಷ್ಠಾನದ ಸದಸ್ಯೆ ಗೀತಾ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net