ಮತದಾನದ ಚಿತ್ರೀಕರಣ ಮಾಡಿ: ತಹಸೀಲ್ದಾರ್ ಸುರೇಶ ವರ್ಮಾ ಹೇಳಿಕೆ

Untitled design (1)
ಸಿರಿವಾರ ತಹಸಿಲ್ ಕಚೇರಿಯಲ್ಲಿ ತಹಸೀಲ್ದಾರ್ ಸುರೇಶ ವರ್ಮಾ ಅಧ್ಯಕ್ಷತೆಯಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಪೂರ್ವಭಾವಿ ಸಭೆ ನಡೆಯಿತು. ವಿವಿಧ ಇಲಾಖೆಗಳ ಅಧಿಕಾರಿಗಳಾದ ಶ್ಯಾಮುವೇಲಪ್ಪ, ಬಸವರಾಜ, ತಿಮ್ಮಪ್ಪ ಜಗ್ಲಿ, ಹಂಪಯ್ಯ ಇದ್ದರು.
Published on

ಸಿರವಾರ: ತಾಲೂಕಿನ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ತಹಸಿಲ್ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು.


ತಹಸೀಲ್ದಾರ್ ಸುರೇಶ ವರ್ಮಾ ಮಾತನಾಡಿ, ಗೌಪ್ಯ ಮತದಾನ ನಡೆಯಲಿದ್ದು, ಸದಸ್ಯರು ಮತದಾನ ಮಾಡುವ ವೇಳೆ ಕಡ್ಡಾಯವಾಗಿ ಚಿತ್ರೀಕರಣ ಮಾಡಬೇಕು. ಇದಕ್ಕಾಗಿ ಕ್ಯಾಮರಾಮನ್ ನೇಮಕ ಮಾಡಬೇಕು. ಮತದಾನದ ವೇಳೆ ಸದಸ್ಯರನ್ನು ಹೊರತುಪಡಿಸಿ ಅವರ ಕುಟುಂಬಸ್ಥರ ಪ್ರವೇಶ ಮತ್ತು ಮಧ್ಯಸ್ಥಿಕೆಗೆ ಅವಕಾಶ ನೀಡಬಾರದು. ಮತದಾನ ವೇಳೆ ಪಿಡಿಒ, ಗೊತ್ತುಪಡಿಸಿದ ಅಧಿಕಾರಿ, ಗ್ರಾಪಂ ಸಿಬ್ಬಂದಿ, ಪೊಲೀಸ್ ಇಲಾಖೆ ಹೊರತುಪಡಿಸಿ ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net