More

    ಹಲವು ಗ್ರಾಪಂಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

    ಹೂವಿನಹಡಗಲಿ: ತಾಲೂಕಿನ 26 ಗ್ರಾಪಂಗಳ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಪ್ರಾರಂಭಗೊಂಡಿವೆ.

    ಮವಾರ ತಾಲೂಕಿನ ಹೊಳಗುಂದಿ ಗ್ರಾಪಂಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನೇತ್ರಮ್ಮ ಮತ್ತು ದಡಾರಪ್ಪ ಸ್ಪರ್ಧಿಸಿದ್ದರು. 18 ಮತಗಳಲ್ಲಿ ದಡಾರಪ್ಪ 06 ಮತ ಪಡೆದರೆ ನೇತ್ರಮ್ಮ 12 ಮತ ಪಡೆದು ಅಧ್ಯಕ್ಷೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಗುರುಬಸವರಾಜ ಅವಿರೋಧ ಆಯ್ಕೆಯಾಗಿದ್ದಾರೆ.

    ಮೈಲಾರ ಗ್ರಾಪಂ ಅಧ್ಯಕ್ಷೆಯಾಗಿ ಜಾನಕಮ್ಮ, ಉಪಾಧ್ಯಕ್ಷೆಯಾಗಿ ನೀಲಮ್ಮ ಚೌಟಗಿ, ಮಕರಬ್ಬಿ ಗ್ರಾಪಂ ಅಧ್ಯಕ್ಷೆಯಾಗಿ ಶಿವಲೀಲಾ ಲಿಂಗನಗೌಡ್ರ, ಉಪಾಧ್ಯಕ್ಷೆಯಾಗಿ ಗಂಗಮ್ಮ ಬರಮಪ್ಪನವರ ಅವಿರೋಧ ಆಯ್ಕೆಯಾಗಿದ್ದಾರೆ.

    ಮಂಗಳವಾರ ನಡೆದ ಇಟ್ಟಿಗಿ ಗ್ರಾಪಂಗೆ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಷ್ಟ್ರನಗೌಡ್ರು ಸಿದ್ದಪ್ಪ, ಉಪಾಧ್ಯಕ್ಷೆಯಾಗಿ ಎಂ.ಲಕ್ಷ್ಮಕ್ಕ ಅವಿರೋಧ ಆಯ್ಕೆಯಾದರು.

    ಇದನ್ನೂ ಓದಿ: ಎಂ.ಎಸ್​. ಧೋನಿ ನಿರ್ಮಾಣದ ‘ಲೆಟ್ಸ್ ಗೆಟ್ ಮ್ಯಾರೀಡ್’ ಚಿತ್ರಕ್ಕೆ ಸಿಕ್ತು ಸೆನ್ಸಾರ್​ ಮಂಡಳಿಯಿಂದ ಗ್ರೀನ್​ ಸಿಗ್ನಲ್!

    ಮಹಜನದಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಹಳ್ಳಿ ಹನುಮಂತಪ್ಪ ಹಾಗೂ ಬಿ.ಸೇತುರಾಮ್ ಇಬ್ಬರು ಸ್ಪರ್ಧಿಸಿದ್ದರು. ಬಿ.ಸೇತುರಾಮ್ 11 ಮತ ಪಡೆದರೆ, ಹಳ್ಳಿ ಹನುಮಂತಪ್ಪ 12 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಮರಿಗೌಡ್ರು ನಾಗಲಿಂಗಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು.

    ಹೊಳಲು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಹಲಗೇರಿ ಹಾಗೂ ಮಂಜುನಾಥ ಮರಿಯಜ್ಜನವರು ಸ್ಪರ್ಧಿಸಿದ್ದರು. 25 ಮತಗಳ ಪೈಕಿ ಮಂಜುನಾಥ ಮರಿಯಜ್ಜನವರ 10 ಮತ ಪಡೆದರೆ, ಮಂಜುನಾಥ ಹಲಗೇರಿ 15 ಮತ ಪಡೆದು ಅಧ್ಯಕ್ಷರಾದರು. ಉಪಾಧ್ಯಕ್ಷ ಸ್ಥಾನಕ್ಕೆ ದಾಕ್ಷಾಯಣಮ್ಮ ಚನ್ನವೀರಯ್ಯ ಕಲ್ಮಠ ಹಾಗೂ ನಾಗವೇಣಿ ಶೆರಗಾರ ಇಬ್ಬರು ಸ್ಪರ್ಧಿಸಿದ್ದರು. ನಾಗವೇಣಿ ಶೆರಗಾರ 8 ಮತ ಪಡೆದರೆ, ದಾಕ್ಷಾಯಣಮ್ಮ ಚನ್ನವೀರಯ್ಯ ಕಲ್ಮಠ 17 ಮತ ಪಡೆದು ಉಪಾಧ್ಯಕ್ಷೆಯಾದರು.

    15 ಸದಸ್ಯ ಬಲದ ಮಾಗಳ ಗ್ರಾಪಂ ಚುನಾವಣೆಯಲ್ಲಿ 7 ಮಂದಿ ಸದಸ್ಯರು ಗೈರಾಗಿದ್ದರು. ಆದರೂ ಅಧ್ಯಕ್ಷರಾಗಿ ಲಚ್ಚಪ್ಪನವರ ಬಸಮ್ಮ, ಉಪಾಧ್ಯಕ್ಷೆಯಾಗಿ ಯಳಮಾಲಿ ವಿರೂಪಾಕ್ಷಪ್ಪ ಅವಿರೋಧ ಆಯ್ಕೆಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts