More

    ಎಂ.ಎಸ್​. ಧೋನಿ ನಿರ್ಮಾಣದ ‘ಲೆಟ್ಸ್ ಗೆಟ್ ಮ್ಯಾರೀಡ್’ ಚಿತ್ರಕ್ಕೆ ಸಿಕ್ತು ಸೆನ್ಸಾರ್​ ಮಂಡಳಿಯಿಂದ ಗ್ರೀನ್​ ಸಿಗ್ನಲ್!

    ತಮಿಳುನಾಡು: ಭಾರತೀಯ ಕ್ರಿಕೆಟ್​​ ತಂಡದ ಮಾಜಿ ನಾಯಕ, ಮಹೇಂದ್ರ ಸಿಂಗ್​ ಧೋನಿ ಅವರ ‘ಧೋನಿ ಎಂಟರ್​​ಟೈನ್​ಮೆಂಟ್’​ ಬ್ಯಾನರ್​ನಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ‘ಲೆಟ್ಸ್ ಗೆಟ್ ಮ್ಯಾರೀಡ್’​​ಗೆ ಇದೀಗ ಸೆನ್ಸಾರ್​ ಮಂಡಳಿಯಿಂದ ಕ್ಲೀನ್ ಯು ಸರ್ಟಿಫಿಕೇಟ್ ಲಭಿಸಿದೆ.

    ಇದನ್ನೂ ಓದಿ: ಕದ್ದುಮುಚ್ಚಿ ಮದ್ಯ ಮಾರಿದರೆ ಕ್ರಮ: ಬಾರ್ ಮಾಲೀಕರಿಗೆ ಪಿಐ ಕೆ.ಹೊಸಕೇರಪ್ಪ ಎಚ್ಚರಿಕೆ

    ಚಿತ್ರವು ಇದೀಗ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಯು ಸರ್ಟಿಫಿಕೇಟ್ ಪಡೆದುಕೊಂಡಿದ್ದು, ಸಿನಿಮಾದ ರನ್ ಟೈಮ್ 2 ಗಂಟೆ 33 ನಿಮಿಷಗಳಿಗೆ ಲಾಕ್ ಮಾಡಲಾಗಿದೆ. ‘ಲೆಟ್ಸ್​ ಗೆಟ್​ ಮ್ಯಾರೀಡ್’​ ಕಾಮಿಡಿ-ಡ್ರಾಮ್​ ಜಾನರ್​ ಆಗಿದ್ದು, ಚಿತ್ರ ಜುಲೈ 28 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.

    ಧೋನಿ ಅವರ ನಿರ್ಮಾಣದಲ್ಲಿ ತೆರೆಯ ಮೇಲೆ ಬರಲು ಸಜ್ಜಾಗಿರುವ ‘ಲೆಟ್ಸ್ ಗೆಟ್ ಮ್ಯಾರೀಡ್’ ಚಿತ್ರವು ಮೂಲತಃ ತಮಿಳು ಚಲನಚಿತ್ರವಾಗಿದ್ದು, ತೆಲುಗು ಭಾಷೆಯಲ್ಲಿ ಡಬ್​ ಆಗಿ ಆಗಸ್ಟ್​ 04 ರಂದು ರಿಲೀಸ್​ ಆಗಲಿದೆ. ರಮೇಶ್ ತಮಿಳಮಣಿ ನಿರ್ದೇಶನದ ಈ ಚಿತ್ರದಲ್ಲಿ ನಾಯಕನಾಗಿ ಹರೀಶ್ ಕಲ್ಯಾಣ್ ಮತ್ತು ನಾಯಕಿಯಾಗಿ ಇವಾನಾ ಅಭಿನಯಿಸಿದ್ದಾರೆ, ನದಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).

    ರಾತ್ರಿ ಮಲಗಿದ್ದ ಯುವಕ ಬೆಳಗ್ಗೆ ನಾಪತ್ತೆ, 4 ದಿನ ಕಳೆದರೂ ಪತ್ತೆ ಇಲ್ಲ; ನಕ್ಸಲ್​ಪೀಡಿತ ಪ್ರದೇಶದಲ್ಲೀಗ ಆತಂಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts