ಬಾಲಕಿಯಿಂದ ಮತದಾನ ಜಾಗೃತಿ

17 AKR 1A
Published on

ಅಕ್ಕಿಆಲೂರ: ಗ್ರಾಪಂ ಚುನಾವಣೆಯಲ್ಲಿ ಕಡ್ಡಾಯ ಮತದಾನವಾಗಬೇಕೆಂಬ ಉದೇಶದಿಂದ ಪಟ್ಟಣದ ಕುಮಾರನಗರದ ಬಾಲಕಿ ವಚನಾ ಚಿಲ್ಲೂರಮಠ ತನ್ನ ಕೈಬರಹದಿಂದ ಮತದಾನ ಜಾಗೃತಿ ಪತ್ರ ತಯಾರಿಸಿ, ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾಳೆ.

ಡೊಳ್ಳೇಶ್ವರ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ಶಿವಬಸಯ್ಯ ಚಿಲ್ಲೂರಮಠ ಅವರ 7 ವರ್ಷದ ಪುತ್ರಿ ವಚನಾ, ಸ್ಥಳೀಯ ಜ್ಞಾನ ಭಾರತಿ ಶಾಲೆಯಲ್ಲಿ 2 ತರಗತಿ ವಿದ್ಯಾರ್ಥಿಯಾಗಿದ್ದಾಳೆ. ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪಾತ್ರದ ಕುರಿತು ಸ್ವತಃ ಮತದಾನ ಜಾಗೃತಿ ಪತ್ರ ತಯಾರಿಸಿ, ಪ್ರತಿ ಗ್ರಾಮದ ಮನೆಗೆ ತೆರಳಿ, ಶಾಲೆ ಮತ್ತು ಸಮಾರಂಭಗಳಲ್ಲಿ ಜಾಗೃತಿ ಮೂಡಿಸಿದ್ದಳು. ಈಗ ಗ್ರಾಪಂ ಚುನಾವಣೆಯಲ್ಲಿ ಮತ್ತೆ ತನ್ನ ಕೈಬರಹದಿಂದ ಮತದಾನ ಮಹತ್ವದ ಪತ್ರ ತಯಾರಿಸಿ, ಮನೆಮನೆಗೆ ಹೋಗಿ ಕಡ್ಡಾಯ ಮತದಾನ ಕುರಿತು ಅರಿವು ಮೂಡಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಬಾಲಕಿಯ ಕಾರ್ಯಕ್ಕೆ ತಾಲೂಕು ಚುನಾವಣೆ ಅಧಿಕಾರಿ ಪಿ.ಎಸ್. ಎರ್ರಿಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಚನಾಳ ಸಾಮಾಜಿಕ ಪ್ರಜ್ಞೆ ಮನಗಂಡು ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿಶೇಷ ಪ್ರತಿಭಾವಂತ ಮಗು ಎಂದು ಶ್ಲಾಘನೆಗೆ ಒಳಗಾಗಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net