

ಕೊಕ್ಕರ್ಣೆ: ಜಿಲ್ಲಾ ಮೊಗವೀರ ಯುವ ಸಂಟನೆಯ ಮಂದಾರ್ತಿ ಟಕ ಹಾಗೂ ಮಹಿಳಾ ಸಂಟನೆ, ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ನೇತೃತ್ವದಲ್ಲಿ ನಾಲ್ಕೂರು ನೇತಾಜಿ ಸೇವಾ ವೇದಿಕೆ, ಮಂದಾರ್ತಿ ಕೆ.ಎಂ.ಉಡುಪ ಪ್ರತಿಷ್ಠಾನ, ಉಡುಪಿ ಜಿಲ್ಲಾಡಳಿತ, ಮಣಿಪಾಲ ಕೆ.ಎಂಸಿ. ರಕ್ತನಿಧಿ ವಿಭಾಗದ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಜರುಗಿತು. ಮೊಗವೀರ ಯುವ ಸಂಟನೆ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ ಉದ್ಘಾಟಿಸಿದರು. ಮಂದಾರ್ತಿ ಟಕ ಅಧ್ಯಕ್ಷ ರವಿ ಮರಕಾಲ ಬಿಲ್ಲಾಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ 50ನೇ ಬಾರಿ ರಕ್ತದಾನ ವಾಡಿದ ಜಯಕರ ಪೂಜಾರಿ ಬಾರ್ಕೂರು ಇವರನ್ನು ಸನ್ಮಾನಿಸಲಾಯಿತು. ನಾಲ್ಕೂರು ನೇತಾಜಿ ಸೇವಾ ವೇದಿಕೆ ಸ್ಥಾಪಕ ಅಧ್ಯಕ್ಷ ಪ್ರಸಾದ್ ಹೆಗ್ಡೆ, ಅಧ್ಯಕ್ಷ ಅವಿನಾಶ್ ರಾವ್, ಮೊಗವೀರ ಯುವ ಸಂಟನೆ ವಾಜಿ ಅಧ್ಯಕ್ಷ ರಾಜೇಂದ್ರ ಸುವರ್ಣ, ಸ್ಥಾಪಕ ಅಧ್ಯಕ್ಷ ಅಶೋಕ್ ಎಲ್.ಕುಂದರ್, ಜಿಲ್ಲಾ ಸಂಟನೆ ಉಪಾಧ್ಯಕ್ಷ ರವಿ ಕೊರವಡಿ, ಮಂದಾರ್ತಿ ಟಕದ ಉಸ್ತುವಾರಿ ಅಶೋಕ್ ತೆಕ್ಕಟೆ, ಜಿಲ್ಲಾ ಸಂಟನೆ ಉಪಾಧ್ಯಕ್ಷೆ ಪ್ರೇವಾ ಬಂಗೇರ, ಮಂದಾರ್ತಿ ಮಹಿಳಾ ಸಂಟನೆ ಅಧ್ಯಕ್ಷೆ ಭಾರತಿ ನೈಲಾಡಿ, ಕೆ.ಎಂ.ಸಿ.ರಕ್ತನಿಧಿ ವಿಭಾಗದ ಡಾ.ಕಾವ್ಯಾ, ಎನ್‌ಎಸ್‌ಎಸ್ ಯೋಜನಾಧಿಕಾರಿ ಸವಿತಾ ಎರ್ವಾಳ್ ಉಪಸ್ಥಿತರಿದ್ದರು. ಮಂದಾರ್ತಿ ಟಕ ಕಾರ್ಯದರ್ಶಿ ಸಚಿನ್ ಬಂಗೇರ ನಡೂರು ಸ್ವಾಗತಿಸಿ, ವಂದಿಸಿದರು. ಸ್ವಾತಿ ನೈಲಾಡಿ ನಿರೂಪಿಸಿದರು.