ಪ್ರಯತ್ನದಿಂದ ಉನ್ನತಿ ಸಾಧ್ಯ

gan (3)
Published on

ಕುಂದಾಪುರ: ನಾವು 84 ಲಕ್ಷ ಕೋಟಿ ಜನ್ಮಗಳನ್ನು ದಾಟಿ ಮನುಷ್ಯ ಜನ್ಮ ಪಡೆದಿದ್ದೇವೆ. ದೇಹವನ್ನು ಶುದ್ಧೀಕರಿಸುವಂತೆ ಸದಾ ಮನಸ್ಸನ್ನು ಶುದ್ಧ ಮಾಡಿಕೊಳ್ಳುತ್ತಿರಬೇಕು. ನಾವು ನಮ್ಮ ಬಗ್ಗೆಯಷ್ಟೇ ಮಾತಾಡಬೇಕು. ಪ್ರಯತ್ನದಿಂದ ಸಾಧನೆ ಸಾಧ್ಯ ಎಂದು ಕಾಸರಗೋಡು ಗೀತಾಜ್ಞಾನ ಯಜ್ಞ ಸಮಿತಿ ಪ್ರಧಾನ ಗುರು ಸುಬ್ರಾಯ ನಂದೋಡಿ ಹೇಳಿದರು. ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಸಂದೇಶಗಳನ್ನು ತಿಳಿಸುವ ಗೀತಾ ಸಂದೇಶ ಸಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲಾ ಪ್ರಾಂಶುಪಾಲ ಶರಣಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಆಡಳಿತಾಧಿಕಾರಿ ವೀಣಾರಶ್ಮಿ ಎಂ. ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ರಾಮ ದೇವಾಡಿಗ ಸ್ವಾಗತಿಸಿದರು. ಶಿಕ್ಷಕ ರಾಮಕೃಷ್ಣ ಉಡುಪ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net