ಸಲ್ಕೋಡು ಶಾಲೆಯಲ್ಲಿ ವಾಲಿಬಾಲ್ ಟೂರ್ನಿ

vollyball-1
ವಂಡ್ಸೆ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ವಾಲಿಬಾಲ್ ಟೂರ್ನಿಯನ್ನು ಜಡ್ಕಲ್ ಗ್ರಾಪಂ ಅಧ್ಯಕ್ಷೆ ಪಾರ್ವತಿ ಬೆಳಾರಿ ಉದ್ಘಾಟಿಸಿದರು
Published on

ಬೈಂದೂರು: ಜಡ್ಕಲ್ ಗ್ರಾಮದ ಸಲ್ಕೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಂಡ್ಸೆ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ವಾಲಿಬಾಲ್ ಟೂರ್ನಿ ಜರುಗಿತು.

ಜಡ್ಕಲ್ ಗ್ರಾಪಂ ಅಧ್ಯಕ್ಷೆ ಪಾರ್ವತಿ ಬೆಳಾರಿ ಉದ್ಘಾಟಿಸಿದರು. ಗ್ರಾಪಂ ಸದಸ್ಯ ಚಂದ್ರಮೋಹನ್, ಪಿಡಿಒ ಸತೀಶ್ ತೋಳಾರ್, ಕಾರ್ಯದರ್ಶಿ ಶಂಕರ ಆಚಾರ್ಯ, ಎಸ್‌ಡಿಎಂಸಿ ಅಧ್ಯಕ್ಷ ಹಣಿ ಕುರಿಯಾಕೋಸ್, ಉಪಾಧ್ಯಕ್ಷೆ ಪ್ರೇಮಾ, ನಿಕಟಪೂರ್ವ ಅಧ್ಯಕ್ಷ ರಘುರಾಮ ಪೂಜಾರಿ, ಉಪಾಧ್ಯಕ್ಷ ಜೋಮೋನ್ ವಡಕೆಮುರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಕ್ಷತ್ರ ನಾಯ್ಕ, ಉಪಾಧ್ಯಕ್ಷ ಶೇಖರ ಪೂಜಾರಿ, ಸುವರ್ಣ ವಿದ್ಯಾನಿಧಿ ಅಧ್ಯಕ್ಷ ಸುರೇಂದ್ರ ನಾಯ್ಕ, ಉಪಾಧ್ಯಕ್ಷ ಮಹಾಬಲ ಪೂಜಾರಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಅರುಣ್ ಶೆಟ್ಟಿ, ಕೊಲ್ಲೂರು ಸಿಆರ್‌ಪಿ ಶೈಲಜಾ, ವಂಡ್ಸೆ ಸಿಆರ್‌ಪಿ ನಾಗರಾಜ ಶೆಟ್ಟಿ, ಬೀಸಿನಪಾರೆ, ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ಮುಖ್ಯಶಿಕ್ಷಕ ರಾಜೀವ ಶೆಟ್ಟಿ, ಶಿವರಾಮ ನಾಯ್ಕ ದುಡ್ಡಿನಗುಳಿ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಇದ್ದರು. ಮುಖ್ಯಶಿಕ್ಷಕ ಭಾಸ್ಕರ ನಾಯ್ಕ ಸ್ವಾಗತಿಸಿ, ಸಹಶಿಕ್ಷಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಕುಮಾರ್ ವಂದಿಸಿದರು.

ಸ್ಪರ್ಧಾ ವಿಜೇತರು

(ಹುಡುಗರ ತಂಡ) ಪ್ರಥಮ: ಸಳ್ಕೊಡು ಶಾಲೆ, ದ್ವಿತೀಯ: ವಂಡ್ಸೆ ಶಾಲೆ, (ಹುಡುಗಿಯರ ತಂಡ) ಪ್ರಥಮ: ಸಳ್ಕೊಡು ಶಾಲೆ, ದ್ವಿತೀಯ: ಚಿತ್ತೂರು ಶಾಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net