ಅಡುಗೆ ಭಾವನಾತ್ಮಕ ಕಲೆ

expert
ವಳಚ್ಚಿಲ್ ಎಕ್ಸ್‌ಪರ್ಟ್ ಪ.ಪೂ. ಕಾಲೇಜಿನಲ್ಲಿ ಭಾನುವಾರ ಎಕ್ಸ್‌ಪರ್ಟ್ ಮಾಸ್ಟರ್ ಶೆ್ೆ ಸ್ಪರ್ಧೆ ಉದ್ಘಾಟನೆಗೊಂಡಿತು
Published on

ಮಂಗಳೂರು: ಅಡುಗೆ ಎನ್ನುವುದು ಕಲೆಯಾಗಿದ್ದು, ಉತ್ತಮ ಭಾವನೆಗಳಿರುವವನು ಉತ್ತಮ ಅಡುಗೆದಾರನಾಗಲು ಸಾಧ್ಯ. ತಿನ್ನುವವನ ಮೇಲೆ ಪ್ರೀತಿಯಂತಹ ಭಾವನಾತ್ಮಕ ವಿಚಾರಗಳು ಮಾಡುವವನಿಗೆ ಮೂಡಿದಾಗ ಅಡುಗೆ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ಡಾ.ಉಷಾ ಪ್ರಭಾ ಎನ್.ನಾಯಕ್ ಹೇಳಿದರು.

ಭಾನುವಾರ ವಳಚ್ಚಿಲ್‌ನಲ್ಲಿರುವ ಎಕ್ಸ್‌ಪರ್ಟ್ ಪ.ಪೂ. ಕಾಲೇಜಿನ ಕ್ಯಾಂಪಸ್‌ನಲ್ಲಿರುವ ಕಲ್ಚರಲ್ ಸೆಂಟರ್‌ನಲ್ಲಿ‘ಎಕ್ಸ್‌ಪರ್ಟ್ ಮಾಸ್ಟರ್ ಶ್ೆ ಸ್ಪರ್ಧೆ-2024’ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡುವಂತಹ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಇಂತಹ ಅಡುಗೆ ಕಾರ‌್ಯಕ್ರಮ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಬದುಕಿನ ಪಾಠವನ್ನು ಮಾಡಲಾಗುತ್ತಿದೆ. ಐತಿಹಾಸಿಕವಾಗಿ ಅಡುಗೆ ಮಾಡುವ ವಿಚಾರದಲ್ಲಿ ಪುರುಷರು ಕೂಡ ಮಂಚೂಣಿಯಲ್ಲಿದ್ದು, ನಳಮಹಾರಾಜ, ಭೀಮನ ಜತೆಗೆ ಇಂದಿನ ದೊಡ್ಡ ದೊಡ್ಡ ೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಪುರುಷರೇ ಹೆಚ್ಚಾಗಿ ಅಡುಗೆ ಮನೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮನೆಯಲ್ಲಿ ಮಾತ್ರ ಮಹಿಳೆಯರೇ ಅಡುಗೆ ಕೆಲಸದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದರು.

ನಿರ್ಮಲಾ ಟ್ರಾವೆಲ್ಸ್ ಮತ್ತು ವತಿಕಾ ಇಂಟರ್ ನ್ಯಾಶನಲ್ ಟ್ರಾವೆಲ್ಸ್‌ನ ಮಾಲೀಕರಾದ ವತಿಕಾ ಪೈ ಮಾತನಾಡಿ, ಅಡುಗೆ ಬದುಕಿಗೆ ಅಗತ್ಯ ಕಲೆಯಾಗಿದ್ದು, ಇದರಲ್ಲಿ ಸೃಜನಶೀಲತೆ ಜತೆಗೆ ಬಳಸುವ ವಸ್ತುಗಳ ಲೆಕ್ಕಚಾರಗಳು ಕೂಡಿರುತ್ತದೆ. ಮಾಡುವ ಅಡುಗೆಯಲ್ಲಿ ಸಂಪ್ರದಾಯ, ಸಂಸ್ಕೃತಿಯ ಮಿಶ್ರಣಗಳ ಜತೆಗೆ ಆಧುನಿಕ ಶೈಲಿಯ ಅಳವಡಿಕೆ ಸೇರ್ಪಡೆಗೊಂಡಿರುತ್ತದೆ ಎಂದರು.

ಸಂಸ್ಥೆಯ ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಎಕ್ಸ್‌ಪರ್ಟ್ ಸಂಸ್ಥೆ ಐಟಿ ನಿರ್ದೇಶಕ ಅಂಕುಶ್ ಎನ್ ನಾಯಕ್, ಸ್ಪರ್ಧೆಯ ಪ್ರಾಯೋಜಕರಾದ ಸ್ಪೈಸೀಸ್ ಆ್ಯಂಡ್ ಶ್ೆನ ಮ್ಯಾನೇಜಿಂಗ್ ಡೈರೆಕ್ಟರ್ ದಿನೇಶ್ ಪಿಳೈ, ವಳಚ್ಚಿಲ್ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಡಾ.ಎನ್.ಕೆ. ವಿಜಯನ್ ಕರಿಪ್ಪಾಲ್, ಸ್ಪರ್ಧೆಯ ತೀರ್ಪುಗಾರರಾಗಿ ಡಾ. ವಿಶ್ವಾಸ್ ಕೆ ಪೈ, ರಾಹುಲ್ ಭಟ್, ಸುಭಾಷ್ ಪ್ರವೀಣ್ ಉಳ್ಳಾಲ್, ಡಾ.ರಾಹುಲ್ ಕಾಮತ್ ಹಾಗೂ ಸ್ವಾತಿ ಆನಂದ್ ಶೆಟ್ಟಿ ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿದ್ದ 12 ತಂಡಗಳಲ್ಲಿ ಮೂವರು ವಿದ್ಯಾರ್ಥಿಗಳು ಹಾಗೂ ಒಬ್ಬ ಪಾಲಕರು ಭಾಗವಹಿಸಿದ್ದರು. ಅಡುಗೆಗೆ ಬೇಕಾದ ತರಕಾರಿ, ದಿನಸಿ ಸಾಮಾನು ಹಾಗೂ ಇತರ ವಸ್ತುಗಳನ್ನು ಆಯ್ಕೆ ಮಾಡಿ ಸ್ಥಳದಲ್ಲೇ ಅಡುಗೆ ಮಾಡಲಾಯಿತು. ನಿಶಾತ್ ಾತಿಮಾ ಹಾಗೂ ಡಾ. ನಾರಾಯಣ ಯು ಕುಡ್ವ ಕಾರ‌್ಯಕ್ರಮ ನಿರೂಪಿಸಿದರು.

ಸ್ಪರ್ಧೆ ವಿಜೇತರು

ಬರ್ಬೆಕ್ ಬಬ್ಲೀಸ್ ತಂಡ(ಸೃಷ್ಟಿ ಅಗರ್ವಾಲ್, ಈಶಾನ್ಯಿ ಆರ್. ಮಾನೆ, ವೈಷ್ಣವಿ ರೆಡ್ಡಿ, ಪ್ರೀತಿ ಅಗರ್ವಾಲ್) ಪ್ರಥಮ ಸ್ಥಾನ ಗಳಿಸಿತು. ವಿಸ್ಕ್ ವಾರಿಯರ್ಸ್(ಬೆನೀಶ ಪ್ರಮೋದ್, ದೀಕ್ಷಾ ಜೆ.ಎಸ್, ಪ್ರಜ್ಞಾ ಎ. ಹೊನ್ನಾಳ್, ಸೌಮ್ಯಶ್ರೀ) ದ್ವಿತೀಯ ಸ್ಥಾನ ಮತ್ತು ಫ್ರೈ ಫ್ರಾೃಂಕೀಸ್(ಮಹಿಮಾ ವಿ, ಸಾಹಿತ್ಯಾ ಎಂ, ಪಲ್ಲವಿ ಡಿ.ಜಿ, ಹೇಮಶ್ರೀ) ತೃತೀಯ ಸ್ಥಾನ ಗಳಿಸಿದರು. ವಿಜೇತರಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net