ಉಜಿರೆ ಫ್ರೆಂಡ್ಸ್, ಎಸ್‌ಡಿಎಂ ತಂಡ ಪ್ರಥಮ : ವಿದ್ವತ್ ಟ್ರೋಫಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

New Project (7)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ವಿದ್ವತ್ ಪಿಯು ಕಾಲೇಜು ಗುರುವಾಯನಕೆರೆ ನೇತೃತ್ವದಲ್ಲಿ ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿ ಸಹಯೋಗದೊಂದಿಗೆ ತಾಲೂಕು ಮಟ್ಟದ ಪುರುಷರ ಮತ್ತು ಆಹ್ವಾನಿತ ಮಹಿಳೆಯರ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ವಿದ್ವತ್ ಪಿಯು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 4 ಆಹ್ವಾನಿತ ಮಹಿಳಾ ತಂಡಗಳಲ್ಲಿ ಉಜಿರೆಯ ಎಸ್.ಡಿ.ಎಂ ತಂಡ ಪ್ರಥಮ ಸ್ಥಾನ, ಮಂಗಳ ಸ್ಪೋರ್ಟ್ಸ್ ಕ್ಲಬ್ ಉರ್ವಾ ಸ್ಟೋರ್ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಪುರುಷರ ವಿಭಾಗದಲ್ಲಿ ತಾಲೂಕಿನ 22 ತಂಡಗಳು ಭಾಗವಹಿಸಿ, ಫ್ರೆಂಡ್ಸ್ ಉಜಿರೆ ಎ ತಂಡ ಪ್ರಥಮ, ದ್ವಿತೀಯ ಆರ್ ಜೆ ಫ್ರೆಂಡ್ಸ್ , ತೃತೀಯ ಭಜರಂಗಿ ಬಾಯ್ಸ ಬಿ ತಂಡ ಹಾಗೂ ಫ್ರೆಂಡ್ಸ್ ಉಜಿರೆ ಬಿ ತಂಡ ಚತುರ್ಥ ಸ್ಥಾನ ಪಡೆದುಕೊಂಡಿತು.

ವಿದ್ವತ್ ಎಜುಕೇಶನ್ ಫೌಂಡೇಷನ್‌ನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಜನೆಯ ಜತೆಗೆ ಕ್ರೀಡೆ ಮಕ್ಕಳಲ್ಲಿ ಹುರುಪು ತುಂಬುವುದು ಮತ್ತು ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಪ್ರಬುದ್ಧರಾಗಲು ಸಹಕಾರಿಯಾಗುತ್ತದೆ. ಮಕ್ಕಳು ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿದ್ವತ್ ಪಿಯು ಕಾಲೇಜಿನ ವಿಶಿಷ್ಟ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕ್ರೀಡೆಗೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕ ಸಧೃಡರಾಗುತ್ತಾರೆ ಎಂದರು.

ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷ ದೇವದಾಸ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ರಾಜಶೇಖರ್ ಶೆಟ್ಟಿ ಮಾತನಾಡಿದರು.

ವಿದ್ವತ್ ಎಜುಕೇಶನ್ ಫೌಂಡೇಷನ್‌ನ ಕೋಶಾಧಿಕಾರಿ ಕಾಶೀನಾಥ್ ಕೆ ಪ್ರಾಸ್ತಾವಿಕವಾಗಿ ಮಾತಾನಾಡಿ ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಯಶವಂತ್ ಗೌಡ ಬೆಳಾಲು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net