

ಕಿನ್ನಿಗೋಳಿ: ಐಕಳ ಕಂಬಳ ವಿಜ್ರಂಭಣೆಯಿಂದ ನಡೆಯಲು ಇಲ್ಲಿನ ಯುವಕರ ತಂಡ ಪಟ್ಟ ಶ್ರಮ ಅಭಿನಂದನೀಯ. ಕಾಂತಾಬಾರೆ ಬೂದಬಾರೆ ಫ್ರೆಂಡ್ಸ್ ಕ್ಲಬ್ ಕಟ್ಟಿಕೊಂಡು ಸವಾಜಮುಖಿ ಕೆಲಸ ಕಾರ್ಯ ವಾಡುತ್ತಿದ್ದು, ಇದೀಗ ವಾದರಿ ಸಂಸ್ಥೆಯಾಗಿದೆ ಎಂದು ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಅವರು ಐಕಳ ಕಾಂತಾಬಾರೆ ಬೂದಾಬಾರೆ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಇತ್ತೀಚೆಗೆ ನಡೆದ ವಾಲಿಬಾಲ್ ಪಂದ್ಯಾಟದ ಸವಾರೋಪದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಯಿತು. ನಿಡ್ಡೋಡಿ ಬಂಟರ ಸಂದ ಬಿ.ಆರ್. ಪ್ರಸಾದ್, ಚಿತ್ತರಂಜನ್ ಭಂಡಾರಿ ಐಕಳ ಬಾವ, ಕುಶಲ ಭಂಡಾರಿ ಐಕಳ ಭಾವ, ಸ್ವರಾಜ್ ಶೆಟ್ಟಿ ಮುಂಡ್ಕೂರು ದೊಡ್ಡಮನೆ, ಶರತ್ ಶೆಟ್ಟಿ ಕಿನ್ನಿಗೋಳಿ, ಶರತ್ ಶೆಟ್ಟಿ ಸ್ಥಳಂತಗುತ್ತು, ಕೃಷ್ಣರಾಜ್ ಶೆಟ್ಟಿ ಐಕಳ, ದೇವಿದಾಸ್ ಶೆಟ್ಟಿ, ಸತೀಶ್ ಅಂಚನ್, ಮೋಹಿತ್ ಕೋಟ್ಯಾನ್, ಸಂಸ್ಥೆಯ ಅಧ್ಯಕ್ಷ ತಾರಾನಾಥ ಶೆಟ್ಟಿ ಐಕಳ ಮತ್ತಿತರರಿದ್ದರು.
ಚೇತನ್ ಸ್ವಾಗತಿಸಿದರು. ಸತೀಶ್ ಶೆಟ್ಟಿ ಮತ್ತು ಶ್ರೀಶ ಸರಫ್ ಐಕಳ ನಿರೂಪಿಸಿದರು.
ಪ್ರಥಮ ಬಹುವಾನವನ್ನು ಶರಣ ಫ್ರೆಂಡ್ಸ್ ಬಲವಿನಗುಡ್ಡೆ, ದ್ವಿತೀಯ - ಕೆ.ಪಿ.ಫ್ರೆಂಡ್ಸ್ ಕುದ್ರಿಪದವು, ತೃತೀಯ - ಬಿ.ಎಸ್.ಕುಳಾಯಿ, ಚತುರ್ಥ - ಮಹಾಲಿಂಗೇಶ್ವರ ರಾಯಿ ತಂಡ ಪಡೆದಿದ್ದು, ವಿಜೇತರಿಗೆ ನಗದು ಬಹುವಾನ, ಟ್ರೋಫಿ ವಿತರಿಸಲಾಯಿತು.