ನಾಳೆಯಿಂದ ಕಟೀಲಿನಲ್ಲಿ ಭ್ರಮರ ಇಂಚರ ನುಡಿಹಬ್ಬ :ಲಕ್ಷ್ಮೀಶ ತೋಳ್ಪಾಡಿ ಅಧ್ಯಕ್ಷತೆ : ನೂತನ ಒಳಾಂಗಣ, ಸಭಾಭವನ ಉದ್ಘಾಟನೆ

New Project (55)
Published on

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾ ಸಂಸ್ಥೆಗಳ ಸಂಯೋಜನೆಯಲ್ಲಿ ಭ್ರಮರ ಇಂಚರ ನುಡಿಹಬ್ಬ ನ.22ರಿಂದ 24ರವರೆಗೆ ನಡೆಯಲಿದೆ.

ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಉದ್ಘಾಟಿಸಲಿದ್ದಾರೆ. ನೂತನ ಒಳಾಂಗಣ ಕ್ರೀಡಾಂಗಣ ಹಾಗೂ ಸಭಾಭವನವನ್ನು ಡಾ.ಎ.ಜೆ. ಶೆಟ್ಟಿ ಹಾಗೂ ವಸ್ತು ಪ್ರದರ್ಶನವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಉದ್ಘಾಟಿಸಲಿದ್ದಾರೆ. ಇಂಚರ, ಭ್ರಮರವಾಣಿ ಸಂಚಿಕೆಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ಬಿಡುಗಡೆಗೊಳಿಸುವರು. ಪತ್ರಕರ್ತ ಅಜಿತ್ ಹನಮಕ್ಕನವರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಳಿಕ ನಡೆಯುವ ಗೋಷ್ಠಿಯಲ್ಲಿ ನಾಲ್ಕು ನುಡಿಹಬ್ಬದ ಸಮ್ಮೇಳನಾಧ್ಯಕ್ಷರಾದ ಲಕ್ಷ್ಮೀಶ ತೋಳ್ಪಾಡಿ, ನಾಡೋಜ ಕೆ.ಪಿ.ರಾವ್, ಶ್ರೀಧರ ಡಿ.ಎಸ್, ಪಾದೇಕಲ್ ವಿಷ್ಣು ಭಟ್ ಅವರು ಉಪಸ್ಥಿತರಿರುವರು. ಟಿವಿ ನಿರೂಪಕಿ ಅನುಶ್ರೀ ಸಾಧನೆಗಳೆಡೆ ಸಾಗುವ ಬಗ್ಗೆ ಮಾತನಾಡಲಿದ್ದಾರೆ.

23ರಂದು ಲಕ್ಷ್ಮೀಶ ತೋಳ್ಪಾಡಿ ಅವರೊಂದಿಗೆ ಸಂವಾದ, ಭಾಷಾ ಸೊಗಡು ಗೋಷ್ಠಿಯಲ್ಲಿ ಸಂಸ್ಕೃತದ ಅವಕಾಶಗಳು ಬಗ್ಗೆ ಅವಿನಾಶ ಕೊಡಂಕಿರಿ ಹಾಗೂ ತುಳು ಕಲಿಕೆ ಬಗ್ಗೆ ಡಾ.ವಿ.ಕೆ. ಯಾದವ್ ಮತ್ತು ಯಕ್ಷಗಾನದ ಸೌಂದರ್ಯ ಗೋಷ್ಠಿಯಲ್ಲಿ ಮುರಳೀ ಕಡೇಕಾರ್, ಪು.ಗುರುಪ್ರಸಾದ ಭಟ್ ಮಾತನಾಡಲಿದ್ದಾರೆ. ಜನಸಾಮಾನ್ಯ ಸಾಧಕರಾದ ಧನ್ಯಾ ಪುತ್ತೂರು, ರವಿ ಕಟಪಾಡಿ, ಈಶ್ವರ ಮಲ್ಪೆ, ಕೃಷ್ಣ ಮೂಲ್ಯ, ಶೀನ ಶೆಟ್ಟಿ ಸ್ಪೂರ್ತಿಯ ಮಾತುಗಳನ್ನಾಡಲಿದ್ದಾರೆ.

24ರಂದು ಡಾ.ಅನಂತಪ್ರಭು ಜಿ. ಸಾಮಾಜಿಕ ಜಾಲತಾಣಗಳ ಬಗ್ಗೆ, ಗಿರಿಜಾ ಸಿದ್ದಿ ರಂಗಭೂಮಿ ಸಿನಿಮಾ ಬಗ್ಗೆ, ನಮ್ಮ ಹೆಮ್ಮೆಯ ಇತಿಹಾಸದ ಬಗ್ಗೆ ಮಾಜಿ ಸಂಸದ ಪ್ರತಾಪಸಿಂಹ, ಕನ್ನಡ ಭಾಷೆಯ ಸೊಗಸು ಕುರಿತು ಮನು ಹಂದಾಡಿ ಮಾತನಾಡಲಿದ್ದಾರೆ. ಸಮಾರೋಪದಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಮಪ್ರಕಾಶ ಹೊಳ್ಳ, ಡಾ. ಎಂ.ಪಿ.ಶ್ರೀನಾಥ್ ಗಣೇಶ್ ಸಂಕಮಾರ್, ಮಹಾಬಲ ಪೂಜಾರಿ ಭಾಗವಹಿಸಲಿದ್ದು, ಸಾಧಕ ಹಿರಿಯ ವಿದ್ಯಾರ್ಥಿಗಳಾದ ಸಿಎ ಚಂದ್ರಶೇಖರ ಶೆಟ್ಟಿ, ಕುಡ್ತಿಮಾರುಗುತ್ತು ಭಾಸ್ಕರ ಶೆಟ್ಟಿ ಅವರಿಗೆ ಹಾಗೂ ರಾಜ್ಯ, ರಾಷ್ಟ್ರಮಟ್ಟದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net