ಶೋಷಿತ ಸಮುದಾಯಗಳ ಧ್ವನಿ

06M.D.R.2
Published on

ಮದ್ದೂರು: ತಾಲೂಕು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘದ ವತಿಯಿಂದ ಪರಿ ನಿರ್ವಾಣ ದಿನದ ಅಂಗವಾಗಿ ಪಟ್ಟಣದ ಪುರಸಭಾ ಆವರಣದಲ್ಲಿರುವ ಪುತ್ಥಳಿಗೆ ಬುಧವಾರ ಮಾಲಾರ್ಪಣೆ ಮಾಡಲಾಯಿತು.


ಸಂಘದ ಗೌರವಾಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ದೇಶದ ಶೋಷಿತ ಸಮುದಾಯಗಳ ಧ್ವನಿಯಾಗಿ ಎಲ್ಲ ವರ್ಗದವರಿಗೆ ಸಂವಿಧಾನದ ಮೂಲಕ ಸಮಾನತೆ ಕಲ್ಪಿಸಿಕೊಟ್ಟವರು ಅಂಬೇಡ್ಕರ್ ಎಂದು ಹೇಳಿದರು.


ಸಂಘದ ಅಧ್ಯಕ್ಷ ಶಿವಣ್ಣ, ಪ್ರಧಾ ಕಾರ್ಯದರ್ಶಿ ಕೆ.ಟಿ.ಶಿವಕುಮಾರ್, ಉಪಾಧ್ಯಕ್ಷ, ಬಿ.ವಿ. ನಾರಾಯಣ್, ಖಂಜಾಚಿ ಮುರಳೀಧರ, ಮುಖಂಡರಾದ ಎಂ.ಸೋಮಶೇಖರ್, ಬಿ.ಪಿ.ಗಿರೀಶ್, ರಾಜ್‌ಕುಮಾರ್, ಎಚ್.ಸಿ.ಶಿವಕುಮಾರ್, ಶ್ರೀನಿವಾಸಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net