ಆರೋಗ್ಯಕ್ಕೆ ಕ್ರೀಡೆ ಪೂರಕ

VVFGC_Sports
Published on

ತುಮಕೂರು:  ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆ ಪೂರಕವಾಗಿದೆ ಎಂದು ವಿದ್ಯಾವಾಹಿನಿ ಸಂಸ್ಥೆ ಸಂಸ್ಥಾಪಕ ಕೆ.ಬಿ.ಜಯಣ್ಣ ಹೇಳಿದರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜುಗಳಾದ ವಿದ್ಯಾವಾಹಿನಿ ಪ್ರಥಮ ದರ್ಜೆ ಮತ್ತು ಪಿಜಿ ಕಾಲೇಜು, ವೈಸಿರಿ ಪ್ರಥಮ ದರ್ಜೆ ಕಾಲೇಜು ಮತ್ತು ವಿದ್ಯಾವಾಹಿನಿ ಪ್ಯಾರಮೆಡಿಕಲ್​ ಕಾಲೇಜುಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿವಿಯನ್​ ಸ್ಪೋರ್ಟ್ಸ್​ ಲೀಗ್​ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು ಇಂದಿನ ಆರೋಗ್ಯ ದೃಷ್ಟಿಯಲ್ಲಿ ಬಹಳಷ್ಟು ಮುಖ್ಯ, ಇಂದಿನ ಯುವ ಜನತೆಗೆ ಅದರ ಅರಿವು, ಅಗತ್ಯ ಕ್ರೀಡೆಯಿಂದ ಸಿಗಲಿದೆ . ನಮ್ಮ ಸಂಸ್ಥೆ ಗುಣಮಟ್ಟ ಶಿಕ್ಷಣ ದೊಂದಿಗೆ ವಿದ್ಯಾರ್ಥಿಗಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರೋತ್ಸಾಹ ಒದಗಿಸುತ್ತಾ ಬಂದಿದೆ ಎಂದರು.

ಯಾರು ಶಿಕ್ಷಣ ಮತ್ತು ಕ್ರೀಡೆ ಎರಡನ್ನು ತನ್ನ ಬದುಕಿನಲ್ಲಿ ಸರಿಸಮವಾಗಿ ರೂಢಿಸಿಕೊಳ್ಳುವರೋ ಅವರು ನಿಜವಾಗಿಯೂ ಬದುಕಿನಲ್ಲಿ ಉನ್ನತವಾದ ಸಾಧನೆಯನ್ನು ಮಾಡುತ್ತಾರೆ ಎಂದು ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಸರಸ್ವತಿ ಹೇಳಿದರು.

ಕ್ರೀಡಾ ಕೋಟಾದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಹಲವು ಅವಕಾಶಗಳು ಲಭ್ಯವಿದ್ದು ವಿದ್ಯಾರ್ಥಿಗಳು ಕ್ರೀಡೆಯ ಕಡೆ ಒಲವು ಬೆಳಸಿಕೊಳ್ಳಿ. ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಮೊಬೈಲ್​ ಬಳಕೆಯಿಂದ ಹಲವು ಅನಾರೋಗ್ಯಕರ ಚಟುವಟಿಕೆಗಳಲ್ಲಿ ನಿರತರಾಗುತ್ತಾರೆ. ಇಂತಹ ಅನಾರೋಗ್ಯಕರ ಹವ್ಯಾಸಕ್ಕಿಂತ ಆರೋಗ್ಯಕರ ಕ್ರೀಡಾ ಹವ್ಯಾಸ ರೂಢಿಸಿಕೊಳ್ಳಿ ಎಂದು ತಿಳಿಸಿದರು.

ವಿದ್ಯಾವಾಹಿನಿ ಪ್ರಥಮ ದರ್ಜೆ ಹಾಗೂ ಪಿ.ಜಿ ಕಾಲೇಜಿನ ಪ್ರಾಚಾಯೆರ್ ಡಾ.ಅರುಣ ಹಾಗೂ ವೈಸಿರಿ ಪದವಿ ಕಾಲೇಜಿನ ಪ್ರಾಚಾಯೆರ್ ಅಮೂಲ್ಯ, ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವಿನಯ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net