

ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮಂಜೂರಾದ ವಿವೇಕ ಕೋಣೆಗಳ ನಿರ್ಮಾಣ ಯೋಜನೆ ಯಥಾ ಪ್ರಕಾರ ಮುಂದುವರಿಸಬೇಕು ಎಂದು ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಮಂಜುನಾಥ ನಾಲವಾರಕರ್ ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗಕ್ಕೆ ೧೩೬೦ ವಿವೇಕ ಕೋಣೆಗಳ ನಿರ್ಮಾಣಕ್ಕಾಗಿ ಹಿಂದಿನ ಸರ್ಕಾರ ಹಣ ಮಂಜೂರು ಮಾಡಿದೆ. ಆದರೆ ಈಗ ಏಕಾಏಕಿ ಕೋಣೆ ನಿರ್ಮಾಣಕ್ಕೆ ಬ್ರೇಕ್ ಹಾಕಿರುವುದು ಸರಿಯಲ್ಲ. ಮಕ್ಕಳ ಕಲಿಕೆ ದೃಷ್ಟಿಯಿಂದ ಕೋಣೆಗಳ ಅಭಿವೃದ್ಧಿಗೆ ಮುಂದಾಗಬೇಕು. ವಿವೇಕ ಹೆಸರಿನ ಬದಲು ನೆಹರು ಅಥವಾ ಬಾಪೂಜಿ ಹೆಸರು ಬಳಸಲಿ ಎಂದು ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಇತಿಹಾಸ ಪಠ್ಯಪುಸ್ತಕದಲ್ಲಿ ಸೇರ್ಪಡೆ ಮಾಡಬೇಕು. ಕೆಕೆಆರ್‌ಡಿಬಿಗೆ ನೂತನ ಅಧ್ಯP್ಷÀರನ್ನು ನೇಮಿಸಬೇಕು. ಪೊಲೀಸ್ ಠಾಣೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಜಗನ್ನಾಥ ಸೂರ್ಯವಂಶಿ, ಸಚಿನ್ ಫರಹತಾಬಾದ್, ರವಿ ದೇಗಾಂವ್, ದತ್ತು ಭಾಸಗಿ, ಮನೋಹರ ಬೀರನೂರ್, ವಿ.ಎಚ್. ವಾಲೀಕಾರ್, ಶರಣು ಹೊಸಮನಿ, ಸಿದ್ದು ಜಮಾದಾರ್ ಇದ್ದರು.