

ಕಲಬುರಗಿಯ ಸ್ಟೇಷನ್ ಬಜಾರದ ಮೂರು ಶತಮಾನದ ಪುರಾತನ ವಿಠ್ಠಲ ಮಂದಿರದಲ್ಲಿ ಆಷಾಢ ಏಕಾದಶಿ ಉತ್ಸವ ಸಂಭ್ರಮದಿAದ ನೆರವೇರಿತು. ಮಂದಿರಕ್ಕೆ ಹೂವು, ಮಾವಿನ ತಳ್ಳೀರು, ತೋರಣಗಳಿಂದ ಸಿಂಗರಿಸಲಾಗಿತ್ತು. ನಸುಕಿನಲ್ಲಿ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಶ್ರೀ ವಿಠ್ಠಲ- ರುಕ್ಮಿಣಿ ದೇವರಿಗೆ ಕಾಕಡಾರತಿ, ಪಂಚಾಮೃತ ಅಭಿಷೇಕ, ಜಲಅಭಿಷೇಕ, ಶಯನ ಆರತಿ, ವಿಶೇಷ ಅಲಂಕಾರ ನೆರವೇರಿತು. ಬೆಳಗ್ಗೆಯಿಂದಲೇ ಅಪಾರ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮಂದಿರ ಟ್ರಸ್ಟ್ನಿಂದ ಭಕ್ತರಿಗೆ ತೀರ್ಥ, ಹಣ್ಣು, ಎಳ್ಳಿನ ಉಂಡೆ ಪ್ರಸಾದ ವಿತರಿಸಲಾಯಿತು. ಬೆಳಗ್ಗೆ ಸೂಪರ್ ಮಾರ್ಕೆಟ್‌ನ ಮಾಯಿ ಮಂದಿರದಿAದ ವಿಠ್ಠಲ ಮಂದಿರದವರೆಗೆ ಮಾರ್ವಾಡಿ ಸಮಾಜದಿಂದ ಮಹಾರಾಷ್ಟçದ ಪಂಢರಾಪುರಕ್ಕೆ ಬರುವ ಭಕ್ತರ ಮಾದರಿಯಲ್ಲಿ ದಿಂಢಿ ಮೆರವಣಿಗೆ ನಡೆಸಿ ಭಕ್ತಿ ಸಮರ್ಪಿಸಿದರು. ಮಾಜಿ ಶಾಸಕ ದತ್ತಾತ್ರೇಯ ಪಾಟೀಲï ರೇವೂರ, ಪಾಲಿಕೆ ಸದಸ್ಯ ಮಲ್ಲು ಉದನೂರು, ದೇವಸ್ಥಾನ ಟ್ರಸ್ಟ್ ಅಧ್ಯP್ಷÀ ದತ್ತು ಪುಕಾಳೆ, ಪ್ರಮುಖರಾದ ಗೋಪಾಲರೆಡ್ಡಿ, ಹುಲಿಗೆಪ್ಪ ಕನಕಗಿರಿ, ಶರಣಬಸಪ್ಪ ಕಾಡಾದಿ, ಬ್ರಿಜ್‌ಗೋಪಾಲ ದಾಗಾ, ಧನಂಜಯ ಪುರಿ, ರತನೆ ಮಾನೆ, ರಾಮಕೃಷ್ಣ ಪವಾರ, ಮನೀಶ ಜಾಜು, ದಾಮೋಧರ ಮುಂದಡಾ, ವಿಜಯಕುಮಾರ ಗುಳೆ, ಅನೀಲ ಕಳಸ್ಕರ್, ದತ್ತಾತ್ರೇಯ ಜೇವರ್ಗಿ, ಕಮಲಾಕರ ಅನಗುಂಡಿ, ರಾಘವೇಂದ್ರ ಯರಗೋಳ, ನಾಗೇಂದ್ರ ಝಳತಿ, ಗಂಗಾಧರ ಘೂಳಿ, ಆನಂದ, ಪ್ರವೀಣ ಪುಣೆ ಇತರರಿದ್ದರು.