ಎಸ್‌ಪಿ ಸುಳ್ಯ ಠಾಣೆಗೆ ಭೇಟಿ

sullia sp
ಪೊಲೀಸ್ ಅಧೀಕ್ಷಕ ಯತೀಶ್ ಎನ್.ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದ.ಕ.ಜಿಲ್ಲಾ ಅಡಿಷನಲ್ ಎಸ್.ಪಿ.ರಾಜೇಂದ್ರ ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ಅರುಣ್ ನಾಗೇ ಗೌಡ ಉಪಸ್ಥಿತರಿದ್ದರು.
Published on

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್.ಸುಳ್ಯ ಪೊಲೀಸ್ ಠಾಣೆಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಠಾಣೆಗೆ ಭೇಟಿ ನೀಡಿದ ವೇಳೆ ಸುಳ್ಯ ಪ್ರಭಾರ ವೃತ್ತ ನಿರೀಕ್ಷ ಜಿ.ಜೆ.ಸತೀಶ್, ಸುಳ್ಯ ಠಾಣಾ ಉಪ ನಿರೀಕ್ಷಕರಾದ ಈರಯ್ಯ ದೂಂತೂರು, ಸರಸ್ವತಿ ಹಾಗೂ ಸಿಬ್ಬಂದಿ ಠಾಣೆಯ ವತಿಯಿಂದ ಅವರಿಗೆ ಗೌರವ ವಂದನೆ ಸಲ್ಲಿಸಿದರು.

ಬಳಿಕ ಠಾಣಾ ಸ್ವಚ್ಛತೆ, ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ಪರಿಸರ ವೀಕ್ಷಿಸಿ ಠಾಣಾ ಕಡತಗಳ ನಿರ್ವಹಣೆಯ ಬಗ್ಗೆ ಪರಿಶೀಲಿಸಿದರಲ್ಲದೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಠಾಣಾ ಕರ್ತವ್ಯಗಳ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಿದರು.

ದ.ಕ.ಜಿಲ್ಲಾ ಅಡಿಷನಲ್ ಎಸ್.ಪಿ.ರಾಜೇಂದ್ರ ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ಅರುಣ್ ನಾಗೇಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net