ಕಲ್ಮಂಜದಲ್ಲಿ ಕಾಡಾನೆ ದಾಳಿ

elephant
ಕಾಡಾನೆ ದಾಳಿ ನಡೆಸಿ ಕೃಷಿ ಹಾನಿಗೊಳಿಸಿರುವುದು.
Published on

ಬೆಳ್ತಂಗಡಿ: ಕೆಲದಿನಗಳ ಹಿಂದೆ ಕಡಿರುದ್ಯಾವರ ಗ್ರಾಮದಲ್ಲಿ ಸಂಚರಿಸಿದ ಕಾಡಾನೆ, ಬುಧವಾರ ರಾತ್ರಿ ಕಲ್ಮಂಜ ಗ್ರಾಮದ ಕೆಲವೆಡೆ ಸಂಚರಿಸಿದೆ. ಕಲ್ಮಂಜ ಗ್ರಾಮದ ಬಿರಿಕ್ಕೆ ಪ್ರಸನ್ನ ಕಾಕತ್ಕರ್ ಹಾಗೂ ಗಂಗಾಧರ ಗೌಡ ಅವರ ತೋಟಗಳಿಗೆ ದಾಳಿ ನಡೆಸಿ ಬಾಳೆಗಿಡ ಹಾಗೂ ಅಡಕೆ ಸಸಿಗಳನ್ನು ಮುರಿದು ಹಾಕಿದೆ. ಆನೆ ದಾಳಿಯಿಂದ ಕೃಷಿಕರು ಈಗಾಗಲೆ ಬೇಸತ್ತಿದ್ದಾರೆ. ಪ್ರತಿ ಬಾರಿ ಫಲಬರುವ ಅಡಕೆ ಸಸಿಗಳನ್ನು ಕಳೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಕಡಿರುದ್ಯಾವರದಲ್ಲಿ ಈಗಾಗಲೆ ಸಂತ್ರಸ್ತರ ಸಮಿತಿ ರಚಿಸಿ ಹೋರಾಟಕ್ಕೆ ಇಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net