ಗರಿಕೇಮಠಕ್ಕೆ ಎಡರನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭೇಟಿ

kon (2)
Published on

ಕೊಕ್ಕರ್ಣೆ: ಸಾಹೇಬರಕಟ್ಟೆ ಸಮೀಪದ ಶ್ರೀ ಅರ್ಕಗಣಪತಿ ದೇವಸ್ಥಾನ ಶ್ರೀ ಕ್ಷೇತ್ರ ಗರಿಕೇಮಠಕ್ಕೆ ಮಂಗಳವಾರ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಭೇಟಿ ನೀಡಿದರು.

ಪಂಚಮ ಚಾತುರ್ವಾಸ್ಯ ವ್ರತಾಚರಣೆ ಅಂಗವಾಗಿ ಶ್ರೀ ಕ್ಷೇತ್ರ ಗರಿಕೇಮಠದ ಸಂದರ್ಶನ, ಮಹಾಪೂಜೆ, ವರದಳ್ಳಿ ಶ್ರೀಧರರಾಶ್ರಮದ ಶ್ರೀ ಸದ್ಗುರು ಶ್ರೀಧರ ಸ್ವಾಮಿಗಳ ನಿರ್ಗುಣ ಪಾದುಕಾ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕ್ಷೇತ್ರದ ಮುಖ್ಯಸ್ಥ ರಾಮಪ್ರಸಾದ ಅಡಿಗರ ನೇತೃತ್ವದಲ್ಲಿ ನಡೆಯಿತು. ಇಡಗುಂಜಿ ಕ್ಷೇತ್ರ ಮುಖ್ಯಸ್ಥ ವಿಷ್ಣು ಭಟ್, ನಾಗಭೂಷಣ ಭಟ್ ಕಮಲಶಿಲೆ, ಪ್ರಕಾಶ್ ಭಟ್, ರುಪತಿ ಭಟ್ ಗೆಣಸಿನಕೊಡಿ, ಸದಾಶಿವ ರಾವ್, ಅರ್ಚಕರು, ವಾಧವ ಹೆಗ್ಡೆ ಮಧುವನ, ರವೀಂದ್ರನಾಥ್ ಕಿಣಿ ಸಾಹೇಬರಕಟ್ಟೆ, ಪ್ರಕಾಶ್ ಸುಮುಖ, ಅಶೋಕ್ ಪ್ರಭು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net