ಗೋಶಾಲೆ, ವೃದ್ಧಾಶ್ರಮಕ್ಕೆ ವಿದ್ಯಾರ್ಥಿಗಳ ಭೇಟಿ

blm (2)
Published on

ಕಾರ್ಕಳ: ವಿದ್ಯಾರ್ಥಿಗಳಲ್ಲಿ ಹೈನುಗಾರಿಕೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಹಿರಿಯರ ಬಗ್ಗೆ ಗೌರವ ಮತ್ತು ಇಳಿವಯಸ್ಸಿನ ಹಿರಿಯರ ಬಗ್ಗೆ ಕಾಳಜಿ, ಪ್ರೀತಿ, ಗೌರವ ಮೂಡಿಸುವ ನಿಟ್ಟಿನಲ್ಲಿ ಕಾರ್ಕಳ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅಧ್ಯಯನ ನಿಮಿತ್ತ ಗೋಶಾಲೆ ಹಾಗೂ ವೃದ್ಧಾಶ್ರಮ ಭೇಟಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ತೆಳ್ಳಾರು ರಸ್ತೆಯ ಶೇಷಾದ್ರಿ ನಗರದಲ್ಲಿರುವ ಶ್ರೀ ವೆಂಕಟರಮಣ ಗೋಶಾಲೆಗೆ ಭೇಟಿ ನೀಡಲಾಯಿತು. ಬಳಿಕ ಅಲ್ಲಿನ ವಾತ್ಸಲ್ಯ ಸೇವಾ ಟ್ರಸ್ಟ್‌ನ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿಯ ಕಾರ್ಯ ಚಟುವಟಿಕೆಗಳು ಹಾಗೂ ಹಿರಿಯ ನಾಗರಿಕರ ಜೀವನ ಅನುಭವಗಳನ್ನು ವಿದ್ಯಾರ್ಥಿಗಳು ತಿಳಿದುಕೊಂಡರು. ಗೋಶಾಲೆಯ ವ್ಯವಸ್ಥಾಪಕ ಕೇಶವ ನಾಯಕ್ ಹಾಗೂ ವೃದ್ಧಾಶ್ರಮದ ವ್ಯವಸ್ಥಾಪಕ ಸಂದೀಪ್ ವಿದ್ಯಾರ್ಥಿಗಳಿಗೆ ವಾಹಿತಿ ನೀಡಿದರು. ಉಪನ್ಯಾಸಕ ಪ್ರಕಾಶ್ ಭಟ್, ಉಮೇಶ್ ಬೆಳ್ಳಿಪ್ಪಾಡಿ, ಕೃಷ್ಣಪ್ರಸಾದ್, ಶಹನಾಝ್, ಸುಕನ್ಯಾ, ಶಿಜಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net