

ಶಿರಸಂಗಿ: ವಿವಿಧ ಸಮುದಾಯಗಳ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿಶ್ವಕರ್ಮ ಸಮುದಾಯದ ಕಾರ್ಯ ಮಾದರಿಯಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಗ್ರಾಮದ ವಿಶ್ವಕರ್ಮ ಕುಲದೇವತೆ ಶ್ರೀ ಕಾಳಿಕಾದೇವಿ ಯುಗಾದಿ ಜಾತ್ರಾ ಮಹೋತ್ಸವ ಅಂಗವಾಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಹಾಗೂ ವಿಶ್ವಕರ್ಮ ಪ್ರತಿಷ್ಠಾನದಿಂದ ಈಚೆಗೆ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಹಾಗೂ ದಾನಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಮಾಜಿ ಸಂಸದ ದಿ.ಸುರೇಶ ಅಂಗಡಿ ಕಾಳಿಕಾದೇವಿಯ ಪರಮ ಭಕ್ತರಾಗಿದ್ದರು. ನಾನೂ ಕೂಡ ೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಅಯೋಧ್ಯ ಬಾಲರಾಮನ ಮೂರ್ತಿ ಶಿಲ್ಪಿ ಡಾ.ಅರುಣ ಯೋಗಿರಾಜ ಮಾತನಾಡಿ, ನಮ್ಮ ಕುಲದೇವಿ ಶ್ರೀ ಕಾಳಿಕಾದೇವಿಯ ಆಶೀರ್ವಾದ ರೂಪದಲ್ಲಿ ಪ್ರಶಸ್ತಿ ಲಭಿಸಿರುವುದು ಪೂರ್ವ ಜನ್ಮದ ಪುಣ್ಯ ಎಂದರು.
ಅರೇಮಾದನಹಳ್ಳಿ ಸುಜ್ಞಾನಪೀಠದ ಅನಂತ ಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ, ಚಿಕ್ಕುಂಬಿಯ ಅಭಿನವ ನಾಗಲಿಂಗ ಸ್ವಾಮೀಜಿ, ವಿಕಾಸ ಸಂಸ್ಥೆ ಅಧ್ಯ ಪ್ರೊ.ಪಿ.ಬಿ.ಬಡಿಗೇರ, ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ ಮಾತನಾಡಿದರು.
ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯಿಂದ ಮೈಸೂರಿನ ಶಿಲ್ಪಿ ಡಾ.ಅರುಣ ಯೋಗಿರಾಜ ಅವರಿಗೆ ವಿಶ್ವಕರ್ಮ ಶಿಲ್ಪಕಲಾ ರತ್ನ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರಾದ ವೈಶಾಲಿ ಸುತಾರ, ಅಶೋಕ ಸುತಾರ ಅವರನ್ನು ಸನ್ಮಾನಿಸಲಾಯಿತು. ವಿವಿಧ ಗ್ರಂಥ ಬಿಡುಗಡೆಗೊಳಿಸಲಾಯಿತು.
ಅರ್ಚಕ ತೇಜಪ್ಪಾಚಾರ್ಯ ಮೂಕಿ, ಹು&ಧಾ ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಸಿದ್ದಾಪ್ಪಾಜಿ, ಡಾ.ಪವಿತ್ರಾ ಆಚಾರ್ಯ, ಡಾ.ನಾಗರಾಜ ಆಚಾರ್ಯ, ವಿನಾಯಕ ಆಚಾರ್ಯ, ರಾಜೇಶ, ಗಜಾನನ ಸುತಾರ, ಸುರೇಶ ಪತ್ತಾರ, ಕಿರಣ ಪತ್ತಾರ ಇತರರಿದ್ದರು.