ಶಾರ್ಜಾ ನಮ್ಮವರು ವಿಶ್ವಕರ್ಮ ಸಮಿತಿ ಓಣಂ ಸಂಭ್ರಮ

vishwakarma
Published on

ಕಾಸರಗೋಡು: ದ.ಕ ಹಾಗೂ ಕಾಸರಗೋಡಿನ ವಿಶ್ವಕರ್ಮ ಸಮುದಾಯದವರು ಒಗ್ಗೂಡಿ ರಚಿಸಿರುವ, ‘ನಮ್ಮವರು ವಿಶ್ವಕರ್ಮ ಸಮಿತಿ’ ವತಿಯಿಂದ ಓಣಂ ಹಬ್ಬವನ್ನು ಶಾರ್ಜಾದಲ್ಲಿ ಆಚರಿಸಲಾಯಿತು.

ನೂತನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಹಾಗೂ ಲಾಂಛನ ಬಿಡುಗಡೆ ಮಾಡಲಾಯಿತು. ಹಿರಿಯ ಸದಸ್ಯ ಗಣೇಶ ಆಚಾರ್ಯ ಶೇಣಿ ಅಧ್ಯಕ್ಷತೆ ವಹಿಸಿದ್ದರು.

ಸಮಿತಿ ಗೌರವಾಧ್ಯಕ್ಷರಾಗಿ ವರುಣ್ ಆಚಾರ್ಯ ಬಜಕೂಡ್ಲು, ಅಧ್ಯಕ್ಷ ಮಿಥುನ್ ಆಚಾರ್ಯ ಕುಂಬಳೆ, ಉಪಾಧ್ಯಕ್ಷ ಪ್ರಸಾದ್ ಆಚಾರ್ಯ ಮೂವಾಜೆ, ಕಾರ್ಯದರ್ಶಿ ಮಹೇಶ್ ಆಚಾರ್ಯ ಕಲ್ಪನೆ, ಕೋಶಾಧಿಕಾರಿ ಜ್ಞಾನೇಶ್ ಆಚಾರ್ಯ ಮಾಯಿಪ್ಪಾಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಡೆಯಿತು. ಲಾವಣ್ಯ, ಅನುಷ್ ಆಚಾರ್ಯ, ಸಿಂಧೂರ, ದಿವ್ಯಾ ಜ್ಞಾನೇಶ್, ಪಾವನಾ ವರುಣ್ ಆಚಾರ್ಯ, ಈಶಾನಿ, ಚೈತ್ರ ಕಿಶೋರ್, ವಾಮಿಕ, ಅಶ್ವಿನಿ, ಯುಶಾನ್, ಕಾರ್ತಿಕ್, ದೀಕ್ಷಿತ್ ಆಚಾರ್ಯ ಉಪಸ್ಥಿತರಿದ್ದರು. ಸಮಿತಿಯ ಲಾಂಛನವನ್ನು ವರುಣ್ ಆಚಾರ್ಯ ಬಿಡುಗಡೆಗೊಳಿಸಿದರು.

ಸತ್ಯನಾರಾಯಣ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹೇಶ ಆಚಾರ್ಯ ಕಲ್ಪಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಿಶೋರ್ ಆಚಾರ್ಯ ಕಿನ್ನಿಂಗಾರು ವಂದಿಸಿದರು. ಲಾಂಛನ ತಯಾರಿಸಿದ ಸಂತೋಷ್ ಆಚಾರ್ಯ, ಹಿರಿಯ ಸದಸ್ಯ ಗಣೇಶ್ ಆಚಾರ್ಯ ಶೇಣಿ ಅವರನ್ನು ಸನ್ಮಾನಿಸಲಾಯಿತು. ಓಣಂ ಅಂಗವಾಗಿ ತಿರುವಾದಿರ, ಪೂಕಳಂ, ಓಣಂ ಔತಣಕೂಟ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net