ಮಂಗಳೂರು : ನಗರದ ಶರವು ದೇವಸ್ಥಾನ ರಸ್ತೆಯ ವಾಮನಾಶ್ರಮ ಮಠದಲ್ಲಿ ಶಿರಾಲಿ ಚಿತ್ರಾಪುರ ಮಠದ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರು ಕಳೆದ 2 ತಿಂಗಳಿನಿಂದ ಚಾತುರ್ಮಾಸ ವೃತ ಕೈಗೊಂಡಿದ್ದು ಸೆ.18ರಂದು ಸಮಾಪನಗೊಳ್ಳಲಿದೆ.
ಶ್ರೀಗಳ ಸೀಮೋಲ್ಲಂಘನ ಕಾರ್ಯಕ್ರಮ ಸೆ.18ರಂದು ಸಾಯಂಕಾಲ 4ಕ್ಕೆ ಸುಲ್ತಾನ್ ಬತ್ತೇರಿ ಬಳಿಯಿರುವ ನದಿ ತಟದಲ್ಲಿ ನಡೆಯಲಿದೆ.
ರಾತ್ರಿ7ಕ್ಕೆ ನಗರದ ಗಣಪತಿ ಪ್ರೌಢ ಶಾಲೆಯ ಆವರಣದಿಂದ ದಿಗ್ವಿಜಯೋತ್ಸವ (ಶೋಭಾಯಾತ್ರೆ) ಪ್ರಾರಂಭವಾಗಿ ಭವಂತಿಸ್ಟ್ರೀಟ್, ವೆಂಕಟರಮಣ ದೇವಸ್ಥಾನ ರಸ್ತೆ, ಮಹಮ್ಮಾಯ ದೇವಸ್ಥಾನ ರಸ್ತೆ, ಕೆನರಾ ಹೈಸ್ಕೂಲ್ ಹಿಂಬದಿಯ ರಸ್ತೆ, ನವಭಾರತ ವೃತ್ತ, ಡೊಂಗರಕೇರಿ, ನ್ಯೂಚಿತ್ರಾ ಜಂಕ್ಷನ್, ಬಿ.ಇ.ಎಂ ಹೈಸ್ಕೂಲ್ ರಸ್ತೆ, ರಥಬೀದಿಯಾಗಿ ಗಣಪತಿ ದೇವಸ್ಥಾನ ರಸ್ತೆಯಲ್ಲಿರುವ ಸಮಾಧಿಮಠದಲ್ಲಿ ಸಮಾಪನಗೊಳ್ಳಲಿ