

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಕುಕ್ಕುಜೆ ದೊಂಡೆರಂಗಡಿಯಲ್ಲಿ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸಂಘ ಹಾಗೂ ಗಾಯತ್ರಿ ಮಹಿಳಾ ಮಂಡಳಿಯ ತ್ರೈ ವಾರ್ಷಿಕ ಲೆಕ್ಕಪತ್ರ ಮಂಡನೆ, ಮಹಾಸಭೆ ಭಾನುವಾರ ನಡೆಯಿತು.
ಮೂರು ವರ್ಷಗಳ ಕಾರ್ಯಕಾರಿ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಈಶ್ವರ ಆಚಾರ್ಯ, ಕಾರ್ಯದರ್ಶಿ ಅಶೋಕ್ ಆಚಾರ್ಯ, ಜತೆ ಕಾರ್ಯದರ್ಶಿ ಗುರುಪ್ರಸಾದ್ ಆಚಾರ್ಯ, ಕೋಶಾಧಿಕಾರಿ ಶರತ್ ಆಚಾರ್ಯ ಆಯ್ಕೆಯಾದರು. ಬಳಿಕ ಸಮಿತಿಗೆ ಹತ್ತು ಸದಸ್ಯರ ಆಯ್ಕೆ ನಡೆಯಿತು. ಮಹಿಳಾ ಮಂಡಳಿಗೆ ಪ್ರಸ್ತುತ ಸಮಿತಿಯನ್ನು ಮರುಆಯ್ಕೆಗೊಳಿಸಲಾಯಿತು.
ಪ್ರಮುಖರಾದ ಅರುಣ್ ಕುಮಾರ್ ಹೆಗ್ಡೆ, ಸತೀಶ್ ಪೂಜಾರಿ ಎಳ್ಳಾರೆ, ಸಂಪತ್ ಪೂಜಾರಿ, ವಾಸು ಆಚಾರ್ಯ ಬುಕ್ಕಿಗುಡ್ಡೆ ಮತ್ತು ಪಾರ್ವತಿ ಪರಮೇಶ್ವರ ಆಚಾರ್ಯ ದೊಂಡೆರಂಗಡಿ ಅವರನ್ನು ಸನ್ಮಾನಿಸಲಾಯಿತು. ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದ ಮಾಸ್ಟರ್ ಅದ್ವಿತ್ ಆಚಾರ್ಯ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು.
ಸಂಘದ ಅಧ್ಯಕ್ಷ ಈಶ್ವರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕೇಶ್ ಹೆಗ್ಡೆ, ಪ್ರಮುಖರಾದ ರಾಮಚಂದ್ರ ಆಚಾರ್ಯ, ಕವಿತಾ ಹರೀಶ್, ಸುಮನಾ ಶಾಂಬ್ರಾಯ ಆಚಾರ್ಯ, ರಮೇಶ ಆಚಾರ್ಯ, ಅಶೋಕ್ ಆಚಾರ್ಯ ಉಪಸ್ಥಿತರಿದ್ದರು.