ಕಲಾಕೃತಿಗಳು ಜ್ಞಾನ ಸೂಚಿಸುವ ನಿದರ್ಶನ : ಉಪತಹಸೀಲ್ದಾರ್ ನವೀನ್ ಬೆಂಜನಪದವು ಬಣ್ಣನೆ

sanmana
Published on

ಬಂಟ್ವಾಳ: ವಿಶ್ವಕರ್ಮರ ಜ್ಞಾನದ ಪರಿಧಿ ಅಪರಿಮಿತ. ಅವರಿಂದ ಮೂಡಿಬರುವ ಕಲಾಕೃತಿಗಳೇ ಇದಕ್ಕೆ ನಿದರ್ಶನ ಎಂದು ಬಂಟ್ವಾಳ ಉಪತಹಸೀಲ್ದಾರ್ ನವೀನ್ ಬೆಂಜನಪದವು ಹೇಳಿದರು.

ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ಬಿ.ಸಿ.ರೋಡ್ ಆಡಳಿತ ಸೌಧದಲ್ಲಿ ಮಂಗಳವಾರ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಉದ್ಘಾಟಿಸಿದರು. ಪತ್ರಕರ್ತ ಮೌನೇಶ ವಿಶ್ವಕರ್ಮ ಪ್ರಧಾನ ಭಾಷಣ ಮಾಡಿದರು.

ವಿಶ್ವಕರ್ಮ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ಮಾತನಾಡಿದರು. ಉದಯೋನ್ಮುಖ ಶಿಲ್ಪಿ ಪ್ರಶಾಂತ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಆನೆಗುಂದಿ ಮಹಾ ಸಂಸ್ಥಾನದ ಗುರು ಸೇವಾ ಪರಿಷತ್ ಬಂಟ್ವಾಳ ಘಟಕದ ಅಧ್ಯಕ್ಷ ಯುವರಾಜ ಆಚಾರ್ಯ, ಸಂಘದ ಪದಾಧಿಕಾರಿಗಳಾದ ಕಾರ್ಯದರ್ಶಿ ಸಂದೀಪ್ ಬಿ.ಆಚಾರ್ಯ, ಸುನೀಲ್ ಆಚಾರ್ಯ, ಜಯಪ್ರಕಾಶ ಆಚಾರ್ಯ, ಜಯಚಂದ್ರ ಆಚಾರ್ಯ, ಅಶೋಕ್ ಆಚಾರ್ಯ, ಉಪತಹಸೀಲ್ದಾರ್ ನರೇಂದ್ರ, ರಾಜೇಶ್ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ದಿವಾಕರ್ ಮುಗುಳ್ಯ ಸ್ವಾಗತಿಸಿದರು. ಜನಾರ್ದನ್ ವಂದಿಸಿದರು. ಶ್ರೀಕಲಾ ಕಾರಂತ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net