ಗುರುಪುರ: ವಾಮಂಜೂರಿನ ವಿಶ್ವಕರ್ಮ ಸಮಾಜ ಸೇವಾ ಸಂಘದಿಂದ 22ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆ ಸೋಮವಾರ ಶ್ರೀರಾಮ ಭಜನಾ ಮಂದಿರದಲ್ಲಿ ನೆರವೇರಿತು.
ಬೆಳಗ್ಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ದಿನೇಶ್ ಪುರೋಹಿತರ ಪೌರೋಹಿತ್ಯದಲ್ಲಿ ಮಹಾಪೂಜೆ ನಡೆಯಿತು. ಸಂಘದ ಅಧ್ಯಕ್ಷ ಟಿ.ದಿವಾಕರ ಆಚಾರ್ಯ ತಿರುವೈಲು ಮತ್ತು ಅವರ ಪತ್ನಿ ಪೂಜೆಯ ವ್ರತ ಕೈಗೊಂಡಿದ್ದರು.
ಸಂಘದ ಗೌರವಾಧ್ಯಕ್ಷರಾದ ಯೋಗೀಶ್ ಆಚಾರ್ಯ ವಾಮಂಜೂರು, ಗಿರೀಶ್ ಆಚಾರ್ಯ ವಾಮಂಜೂರು, ಉಮೇಶ್ ಆಚಾರ್ಯ ಬೊಂಡಂತಿಲ, ಉಪಾಧ್ಯಕ್ಷ ರಮೇಶ್ ಆಚಾರ್ಯ ನೀರುಮಾರ್ಗ, ಕೋಶಾಧಿಕಾರಿಗಳಾದ ವಸಂತ ಆಚಾರ್ಯ ವಾಮಂಜೂರು, ಜಗದೀಶ ಆಚಾರ್ಯ ಪಾವೂರು, ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ವಾಮಂಜೂರು, ಜತೆ ಕಾರ್ಯದರ್ಶಿಗಳಾದ ನಾಗೇಶ್ ಆಚಾರ್ಯ ಬೋಂದೆಲ್, ಪ್ರಸಾದ್ ಆಚಾರ್ಯ ಪೆರ್ಮಂಕಿ, ನಾಗೇಶ್ ಆಚಾರ್ಯ ಪೆರ್ಮಂಕಿ, ಪ್ರಭಾಕರ ಆಚಾರ್ಯ ಸಂತೋಷನಗರ, ಸೋಮನಾಥ ಆಚಾರ್ಯ ವಾಮಂಜೂರು, ಉಮೇಶ್ ಆಚಾರ್ಯ ಸಂತೋಷನಗರ, ಸಂಘದ ಸಂಚಾಲಕ ಟಿ.ಶಿವಾನಂದ ಆಚಾರ್ಯ, ಮೊಕ್ತೇಸರರಾದ ಪರಮೇಶ್ವರ ಆಚಾರ್ಯ ಕೆಲರೈಕೋಡಿ, ಮಂಜುನಾಥ ಆಚಾರ್ಯ ತಿರುವೈಲು ಉಪಸ್ಥಿತರಿದ್ದರು.