ಕಲೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದವರು : ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಬಣ್ಣನೆ

New Project (18)
Published on

ಮೂಡುಬಿದಿರೆ: ವಿಶ್ವಕರ್ಮ ಸಮುದಾಯದವರು ಸ್ವರ್ಣ ತಯಾರಿಕೆ, ಶಿಲ್ಪ ಕಲೆ, ಕಟ್ಟಡ ನಿರ್ಮಾಣ, ಯಾವುದೇ ಕೈಗಾರಿಕಾ ಕ್ಷೇತ್ರದಲ್ಲಿ ಪ್ರಸಿದ್ಧರು. ಸಾವಿರ ಕಂಬ ಬಸದಿ ನಿರ್ಮಾಣ, ಶ್ರವಣ ಬೆಳಗೊಳದ ಬಾಹುಬಲಿ ಮೂರ್ತಿ ಸೇರಿದಂತೆ ಯಾವುದೇ ಶಿಲ್ಪ ಕಲೆಗಳಲ್ಲಿ ವಿಶ್ವಕರ್ಮರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.

ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೂಡುಬಿದಿರೆ ಪತ್ರಕರ್ತರ ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ ವಿಶ್ವಕರ್ಮ ಪೂಜೆ, ವಿಶ್ವಕರ್ಮ ಜಯಂತಿಯ ಹಿನ್ನೆಲೆ ವಿವರಿಸಿದರು. ಪುರಸಭಾಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ, ಪೊಲೀಸ್ ಉಪನಿರೀಕ್ಷಕ ನವೀನ್, ಉಪತಹಸೀಲ್ದಾರ್‌ಗಳಾದ ಬಾಲಚಂದ್ರ, ರಾಮ್, ಕಂದಾಯ ನಿರೀಕ್ಷಕ ಮಂಜುನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net