28ಕ್ಕೆ ಆಳ್ವಾಸ್‌ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

Published on

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಬೆಂಗಳೂರಿನ ರಂಗ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಮಾ.28ರಂದು ಮಧ್ಯಾಹ್ನ 3ಕ್ಕೆ ವಿದ್ಯಾಗಿರಿಯ ಕಾಮರ್ಸ್ ಬ್ಲಾಕ್‌ನಲ್ಲಿರುವ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಆಯೋಜಿಸಲಾಗಿದೆ.

ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ನರಸಿಂಹಮೂರ್ತಿ ಆರ್. ‘ಕನ್ನಡ ರಂಗಭೂಮಿಯ ಅವಶ್ಯಕತೆ’ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಿರಿಯ ನಾಟಕ ಮತ್ತು ಚಲನಚಿತ್ರ ಕಲಾವಿದ ಭೋಜರಾಜ ಶೆಟ್ಟಿ ಅವರಿಗೆ ವಿಶ್ವರಂಗ ಗೌರವ ಪ್ರದಾನ ಮಾಡಲಾಗುವುದು. ನಂತರ ವಿದುಷಿ ಸುಮನಾ ಪ್ರಸಾದ್, ನೀನಾಸಂ ಕಲಾವಿದೆ ಮಮತಾ ಕಲ್ಮಕಾರು ತಂಡದಿಂದ ಆಯ್ದ ರಂಗಗೀತೆಗಳ ಗಾಯನ ಮತ್ತು ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯಿಸುವ, ಶಶಿರಾಜ್ ರಾವ್ ಕಾವೂರು ರಚಿಸಿದ, ಜೀವನ್ ರಾಂ ಸುಳ್ಯ ನಿರ್ದೇಶನದ ‘ಏಕಾದಶಾನನ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ದ.ಕ. ಜಿಲ್ಲಾ ಸಂಚಾಲಕ ಡಾ.ಜೀವನ್‌ರಾಂ ಸುಳ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net