ಲಸಿಕೆ ಕುರಿತಾದ ಮಾಹಿತಿ ಪ್ರದರ್ಶನ

Vishveshwarya museum
Published on

ಬೆಂಗಳೂರು: ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ‘ಲಸಿಕೆ’ ಕುರಿತು 6 ತಿಂಗಳ ಮಾಹಿತಿ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಚಾಲನೆ ದೊರೆಯಲಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂ ಮತ್ತು ಸೈನ್ಸ್ ಮ್ಯೂಸಿಯಂ ಲಂಡನ್ ಸಹಯೋಗದಲ್ಲಿ ನಡೆಯಲಿರುವ ಈ ಪ್ರದರ್ಶನದಲ್ಲಿ ನಾನಾ ರೋಗಗಳಿಗೆ ಲಭ್ಯವಿರುವ ಲಸಿಕೆಗಳು, ಹೊಸದಾಗಿ ಸಂಶೋಧಿಸಬೇಕಿರುವ ಲಸಿಕೆಗಳು, ಲಸಿಕೆ, ಲಸಿಕೆಯ ಮಹತ್ವ, ಸಂಶೋಧನೆ ಸೇರಿ ಲಸಿಕೆಯ ಸಮಗ್ರ ಮಾಹಿತಿ ಒಳಗೊಂಡಿರುತ್ತದೆ. ಕೋವಿಡ್ ನಂತರದಲ್ಲಿ ಲಸಿಕೆ ಕುರಿತು ಬಹಳ ಚರ್ಚೆಗಳು ನಡೆಯುತ್ತಿದ್ದು, ಈ ಸಂಬಂಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕೋರ್ಸ್ ಮಾಡುತ್ತಿರುವವರಿಗೆ ಮತ್ತು ಸಾರ್ವಜನಿಕರಿಗೆ ಇದರ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಮ್ಯೂಸಿಯಂನ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net