ಡಾ. ವಿಷ್ಣುವರ್ಧನ ಜನ್ಮ ದಿನೋತ್ಸವ ಆಚರಣೆ

18NRGL1- vishnu
Published on

ನರೇಗಲ್ಲ: ಸಾಹಸ ಸಿಂಹ ಎಂದೇ ಖ್ಯಾತರಾಗಿದ್ದ ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ 13 ವರ್ಷಗಳು ಕಳೆಯುತ್ತಿವೆ. ಇಂದಿಗೂ ಕನ್ನಡಿಗರ ಮನದಲ್ಲಿ ನೆಚ್ಚಿನ ಯಜಮಾನನಾಗಿ ಉಳಿದುಕೊಂಡಿದ್ದಾರೆ ಎಂದು ರಾಜ್ಯ ಪ್ರಶಸ್ತಿ ವಿಜೇತ ಚಂದ್ರಾಮ ಗ್ರಾಮಪುರೋಹಿತ ಹೇಳಿದರು.
ಪಟ್ಟಣದ ಅಬ್ಬಿಗೇರಿ ರಸ್ತೆಯಲ್ಲಿ ಬುಧವಾರ ಡಾ. ವಿಷ್ಣು ಅಭಿಮಾನಿಗಳು ಹಮ್ಮಿಕೊಂಡಿದ್ದ ವಿಷ್ಣು ವರ್ಧನ ಅವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಚಿತ್ರಗಳಲ್ಲಿ ಡಾ. ವಿಷ್ಣುವರ್ಧನ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿದ್ದರು. ವಿವಿಧ ಭಾಷೆಯ 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 14ಕ್ಕೂ ಹೆಚ್ಚು ಚಿತ್ರಗಳಲ್ಲಿ ದ್ವಿ ಪಾತ್ರದಲ್ಲಿ ನಟಿಸಿರುವ ಏಕೈಕ ನಟ ಅಂದರೆ ಡಾ. ವಿಷ್ಣುವರ್ಧನ್ ಅನ್ನೋದು ಹೆಮ್ಮೆಯ ವಿಷಯ. ಡಾ. ವಿಷ್ಣುವರ್ಧನ ಕೇವಲ ನಟನಾಗಿರದೇ ಒಬ್ಬ ಆದರ್ಶ ವ್ಯಕ್ತಿಯಾಗಿದ್ದರು. ಇಂದಿನ ಯುವ ನಟರಿಗೆ ಅವರು ಮಾದರಿಯಾಗಿದ್ದಾರೆ ಎಂದರು.
ನಂತರ ಅನ್ನ ಸಂತರ್ಪಣೆ ಜರುಗಿತು.
ಪ್ರವೀಣ ಮಡಿವಾಳರ, ಗಂಗಾಧರ ಮಡಿವಾಳರ, ವೀರೇಶ ವಾಲಿ, ವಿಶ್ವನಾಥ ಅಬ್ಬಿಗೇರಿ, ಅಯ್ಯಪ್ಪ ಜಕ್ಕಲಿ, ರಾಜೇಸಾಬ ನಶೇಖಾನ, ಸಲಿಂ ನದಾಫ್, ಭರತ ಬಳಗಾನೂರ, ವಿನೋದ ಮಡಿವಾಳರ, ಸಂಗಪ್ಪ ಮಡಿವಾಳರ, ದಯಾನಂದ ಮರಿಗೌಡ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net