ಡಾ.ನಝೀರ್‌ಗೆ ವಿಶಿಷ್ಟ ಪ್ರಶಸ್ತಿ ಪ್ರದಾನ

New Project (17)
Published on

ಗುರುಪುರ: ಬೆಂಗಳೂರಿನಲ್ಲಿ ಆಯೋಜಿಸಲಾದ 2024ನೇ ಸಾಲಿನ ವಿಶ್ವ ಉದ್ಯಮ ಶೃಂಗಸಭೆಯಲ್ಲಿ (ವರ್ಲ್ಡ್ ಬಿಜಿನೆಸ್ ಸಮ್ಮಿತ್) ಪರಿಸರ ಮತ್ತು ಸಮಾಜಸೇವೆಗಾಗಿ ಪುತ್ತೂರಿನ ನಿವಾಸಿ ವಾಣಿಜ್ಯೋದ್ಯಮಿ ಡಾ.ಎಂ.ಸಯ್ಯದ್ ನಝೀರ್ ಅವರಿಗೆ ವಿಶಿಷ್ಟ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೇಂದ್ರ ವಿಜ್ಞಾನಿಗಳ ಜಿ.ಗ್ರೂಪ್ ನಿರ್ದೇಶಕ ಡಾ.ಎನ್.ಪ್ರಭಾಕರನ್ ಮತ್ತು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ನಿವೃತ್ತ ಉಪನಿರ್ದೇಶಕ ಗೋಪಿನಾಥ ರಾವ್ ಆರ್. ಪ್ರಶಸ್ತಿ ಪ್ರದಾನ ಮಾಡಿದರು.

ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ರಮೇಶ್ ಮನ್ಕಾರ್, ಬೆಂಗಳೂರು ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ರಾಜ್ಯ ಶಾಸಕಾಂಗ ಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಕ್ಷಿ, ಐಜಿಒ ಗ್ರೂಪ್ ಸಿಇಒ ಡಾ.ಜಾನ್ ಏಸುದಾಸ್ ಮತ್ತಿತರರು ಉಪಸ್ಥಿತರಿದ್ದರು.

ಡಾ.ನಝೀರ್ ಅವರು ಕೆಲವು ವರ್ಷಗಳಿಂದ ಪರಿಸರ ಘನ ತ್ಯಾಜ್ಯ ನಿರ್ವಹಣೆ, ಬೋಟಿಂಗ್ ಮತ್ತು ಮೀನುಗಾರಿಕೆ, ಪ್ಲಾಸ್ಟಿಕ್ ಮುಕ್ತ ಪರಿಸರ, ಜಲ ಸಂಕ್ಷರಣಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net