

ಕಾಸರಗೋಡು: ರೈಲಿನಲ್ಲಿ ಅನುಚಿತವಾಗಿ ವರ್ತಿಸಿದವನನ್ನು ಯುವತಿಯೊಬ್ಬಳು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನೀಲೇಶ್ವರದಲ್ಲಿ ನಡೆದಿದೆ. ತಿರುವನಂತಪುರ-ಮಂಗಳೂರು ಮಧ್ಯೆ ಸಂಚರಿಸುತ್ತಿದ್ದ ಮಲಬಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ, ನೀಲೇಶ್ವರದಲ್ಲಿ ಇಳಿಯಲು ಮುಂದಾಗುತ್ತಿದ್ದಂತೆ ಕಣ್ಣೂರು ಚೊವ್ವ ನಿವಾಸಿ ಜ್ಯೋತಿಷ್ ಎಂಬಾತ ಯುವತಿ ಜತೆ ಅನುಚಿತವಾಗಿ ವರ್ತಿಸಲಾರಂಭಿಸಿದ್ದನು. ಕಿರುಕುಳ ನೀಡಿ ಮುಂದಕ್ಕೆ ತೆರಳುತ್ತಿದ್ದಂತೆ ಆತನನ್ನು ಹಿಡಿದು ಸ್ಥಳದಲ್ಲಿದ್ದ ಪೊಲೀಸರಿಗೆ ಒಪ್ಪಿಸಿದ್ದಾಳೆ. ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.