

ಬೆಂಗಳೂರು: ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಮಿನಿಸ್ಟರ್ ಕೌನ್ಸಲರ್ ಫಾರ್ ಕೌನ್ಸಲರ್ ಅಧಿಕಾರಿ ರಸೆಲ್ ಬ್ರೌನ್ ಹೇಳಿದ್ದಾರೆ.
ಕಾನ್ಸುಲರ್ ಟೀಮ್ ಇಂಡಿಯಾ, ಚೆನ್ನೆ$ನಲ್ಲಿರುವ ಅಮೆರಿಕ ದೂತಾವಾಸದಲ್ಲಿ ಗುರುವಾರ ಆಯೋಜಿಸಿದ್ದ "ವೀಸಾ ದಿನ' ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿವರ್ಷವೂ ವೀಸಾಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ. ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲು ಹಾಗೂ ಪ್ರಯಾಣ ಸುಗಮಗೊಳಿಸಲು ಅಮೆರಿಕ ಸರ್ಕಾರ ಬದ್ಧವಾಗಿದೆ. ಈ ವರ್ಷವೂ ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿ, ದೂತಾವಾಸಗಳು ಭಾರತದಿಂದ ವಿದ್ಯಾರ್ಥಿ ವೀಸಾ ಅರ್ಜಿದಾರರ ಹೆಚ್ಚಳವನ್ನು ನಿರೀಸುತ್ತಿದೆ. ಇದಕ್ಕಾಗಿ ವಿದ್ಯಾರ್ಥಿ ವೀಸಾ ಋತುವಿನ ಅವಧಿ ವಿಸ್ತರಿಸಲಾಗಿದೆ. ಭಾರತೀಯ ವಿದ್ಯಾರ್ಥಿಗಳಿಗೆ, ಇತರೆ ದೇಶಗಳಗಿಂತ ಯುಎಸ್ ಉನ್ನತ ಶಿಣ ತಾಣವಾಗಿದೆ ಎಂದರು.
ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪದವೀಧರ ವಿದ್ಯಾರ್ಥಿಗಳ ಗುಂಪು ಇದೆ. ವೀಸಾ ಮೂಲಕ ವಿದ್ಯಾರ್ಥಿಗಳು ಶಿಣದ ಜೀವಿತಾವಧಿಯ ಪ್ರಯೋಜನ ಪಡೆಯುತ್ತಿದ್ದಾರೆ. ನಮ್ಮ ದೇಶಕ್ಕೆ ಪ್ರಯಾಣಿಸಲು ಮುಂದಾಗಿರುವ ವಿದ್ಯಾರ್ಥಿಗಳು ನಮ್ಮ ವೈಬ್ಸೈಟ್ಗೆ ಭೇಟಿ ನೀಡಿದರೆ ಶಿಕ್ಷಣ ಸಂಬಂಧ ಮಾಹಿತಿ ದೊರೆಯಲಿದೆ ಎಂದು ರಸೆಲ್ ಬ್ರೌನ್ ಹೇಳಿದರು.
ಶೈಕ್ಷಣಿಕ ಸಂಬಂಧ ವೃದ್ಧಿ:
ವೀಸಾ ದಿನದಂದು 3,900 ವಿದ್ಯಾರ್ಥಿ ವೀಸಾ ಅರ್ಜಿದಾರರನ್ನು ಸಂದರ್ಶಿಸಿದ್ದೇವೆ. ಉನ್ನತ ಶಿಣಕ್ಕೆ ಅಮೇರಿಕಾ ವಿಶೇಷ ಆದ್ಯತೆ ನೀಡುತ್ತಿದೆ. ಯುಎಸ್ ಹಾಗೂ ಭಾರತ ನಡುವೆ ಬೆಳೆಯುತ್ತಿರುವ ಶೈಣಿಕ ಸಂಬಂಧಗಳನ್ನು ಮಿಷನ್ ಇಂಡಿಯಾ ಎತ್ತಿ ತೋರಿಸುತ್ತದೆ. ಅಮೆರಿಕದ ಕ್ಯಾಂಪಸ್ನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಪ್ರಚಂಡ ಯಶಸ್ಸು ಸಾಧಿಸುತ್ತಾನೆ. ಪ್ರತಿಯೊಬ್ಬ ವಿದ್ಯಾರ್ಥಿ ಭಾರತದ ರಾಯಭಾರಿ ಎಂದು ಅಮೆರಿಕದ ಭಾರತದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದರು.