ಕಂಪ್ಲಿ: ತತ್ವ ಪದಕಾರ ಶಿವಶರಣ ಹೇರೂರು ವಿರುಪಣ್ಣ ತಾತನ ಗಂಗೆಸ್ಥಳ ಮೆರವಣಿಗೆ ಸೋಮವಾರ ನಡೆಯಿತು. ತಾತನ ಕರ್ತೃ ಗದ್ದುಗೆಗೆ ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಅನ್ನಸಂತರ್ಪಣೆ, ಹೇರೂರು ವಿರುಪಣ್ಣ ತಾತನ ಭಜನಾ ಮಂಡಳಿಯಿಂದ ಅಖಂಡ ಭಜನೆ ಸೇರಿ ನಾನಾ ಕಾರ್ಯಕ್ರಮಗಳು ನಡೆದವು.
ಇದನ್ನೂ ಓದಿ: ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಅಧಿಕಾರಿಗಳಿಂದ ಪುಷ್ಪ ನಮನ
ಹೇರೂರು ವಿರುಪಣ್ಣ ತಾತನ ಸದ್ಭಕ್ತ ಮಂಡಳಿ ಅಧ್ಯಕ್ಷ ಡಿ.ವಿ.ರಮೇಶ ಗುಪ್ತಾ, ಧರ್ಮಕರ್ತ ಸಿ.ಎಂ.ವೀರಯ್ಯಸ್ವಾಮಿ, ಪದಾಧಿಕಾರಿಗಳಾದ ಉಡೇಗೋಳ್ ರಮೇಶ್, ಉಬಾಳೆ ನಾಗರಾಜ, ಚಾಗಿ ಮಂಜುನಾಥ, ವಿ.ನೀಲಕಂಠ, ರವಿ ಚಿತ್ರಗಾರ, ಪ್ರಕಾಶ ದೇವರು, ಆದೋನಿ ರಂಗಪ್ಪ, ಜಿ.ಶಿವಪ್ಪ, ಉಡೇಗೋಳ್ ವೆಂಕಟೇಶ್, ಶಿರಗೋಜಿ ವೆಂಕಟೇಶ, ಉಡೇಗೋಳ್ ವಿರುಪಣ್ಣ ಸದ್ಭಕ್ತರಿದ್ದರು.