

ಮಾನ್ವಿ: ಪಂಡಿತ ಪುಟ್ಟರಾಜ ಗವಾಯಿಗಳು ಸಾವಿರಾರು ಅಂಧರ ಬಾಳಿಗೆ ಬೆಳಕು ತೋರಿದ ಮಹಾನ್ ಪುರುಷರು ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಹೇಳಿದರು.
ಪಟ್ಟಣದ ಧ್ಯಾನಮಂದಿರದಲ್ಲಿ ವಿರೂಪಾಕ್ಷೇಶ್ವರ ವಿದ್ಯಾಕೇಂದ್ರ ಟ್ರಸ್ಟ್ ಕಲ್ಮಠ ಮಾನ್ವಿ, ವಿದ್ಯಾಧರೆ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ಮಾನ್ವಿ ಜಂಟಿಯಾಗಿ ಪುಟ್ಟರಾಜ ಗವಾಯಿಗಳ 13ನೇ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವರೋಪಾಸನೆ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಗುರು-ಶಿಷ್ಯರ ಪರಂಪರೆ ಸಂಗೀತದ ಮೂಲಕ ಅಂಧರ ಜೀವನ ಕಲ್ಪಿಸಿಕೊಟ್ಟರು. ಅವರ ಆದರ್ಶಗಳು ನೆಮ್ಮೆಲ್ಲರಿಗೆ ಸ್ಫೂರ್ತಿಯಾಗಿದೆ ಎಂದರು.
ಚೀಕಲಪರ್ವಿ ರುದ್ರಮಿನೀಶ್ವರ ಮಠದ ಸದಾಶಿವ ಮಹಾಸ್ವಾಮಿಗಳು ಹಾಗೂ ಅರಳಹಳ್ಳಿಯ ಶರಣಬಸವ ದೇವರು ಮಾತನಾಡಿದರು. ಪಂಡಿತ ವಿರೂಪಾಕ್ಷಯ್ಯ ವಂದಲಿ, ವಿದ್ಯಾಧರೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಬಸವರಾಜ ವಂದಲಿ ಇದ್ದರು.
ಸಂಗೀತ ಕಾರ್ಯಕ್ರಮ: ನಾಗರಾಜ ಶಾವಿ ಕೊಪ್ಪಳ ಅವರು ಬಾನ್ಸೂರಿ ವಾದನ, ವಿಶ್ವೇಶ್ವರಯ್ಯ ಹಿರೇಮಠ ಲಿಂಗಸುಗೂರು ಅವರು ಸುಗಮ ಸಂಗೀತ, ಹಿಂದೂಸ್ತಾನಿ ಶಾಸ್ತ್ರಿಯ ಗಾಯನವನ್ನು ಬಸವರಾಜ ವಂದಲಿ ಧಾರವಾಡ ನಡೆಸಿಕೊಟ್ಟರು. ವಯೋಲಿನ್ ವಾದಕ ನಾರಾಯಣ ಹಿರೇಕೊಳಚಿ ಗದಗ, ಪಂ.ವಿರೂಪಾಕ್ಷಯ್ಯ ವಂದಲಿ ಹಾಗೂ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.