VIDEO: ಹನುಮ ದೇವರಿಗೆ ಮದ್ಯಪ್ರಿಯ ಸಲ್ಲಿಸಿದ ಪೂಜೆ ಇದೀಗ ವೈರಲ್​

Bagalkote Brewers gratitude 4 MAY 20
Published on

ಬಾಗಲಕೋಟೆ: ಕರೊನಾ ಸೋಂಕು ಹರಡದಂತೆ ವಿಧಿಸಲಾಗಿದ್ದ ಲಾಕ್​ಡೌನ್ ಎರಡು ಅವಧಿ ಮುಗಿಸಿ ಮೂರನೇ ಅವಧಿಗೆ ಕಾಲಿಟ್ಟ ಬೆನ್ನಲ್ಲೇ, ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟ ಕಾರಣ ಮದ್ಯಪ್ರಿಯರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ದೇವರಿಗೆ ನಮ್ಮ ಪ್ರಾರ್ಥನೆ ಕೇಳಿದೆ ಎಂಬ ಮಾತು ಮದ್ಯಪ್ರಿಯರ ನಡುವೆ ಹರಿದಾಡುತ್ತಿದೆ. ಸಂಭ್ರಮ ಸಡಗರಗಳನ್ನು ಮದ್ಯ ಪ್ರಿಯರು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

ಇದರಂತೆ, ಬಾಗಲಕೋಟೆಯಲ್ಲಿ ಎಣ್ಣೆಪ್ರಿಯನೊಬ್ಬ ಸೋಮವಾರ ಬೆಳಗ್ಗೆ ದೇವರ ಮುಂದೆ ಮದ್ಯದ ಪೌಚ್ ಇಟ್ಟು ಪ್ರಾರ್ಥಿಸಿದ ವಿಡಿಯೋ ವೈರಲ್ ಆಗಿದೆ. ತನಗೆ ಸಿಕ್ಕ ಮೊದಲ ಪೌಚನ್ನೇ ಹಿಡಿದು ಇಷ್ಟ ದೇವರಾದ ಹನುಮನ ಗುಡಿಗೆ ತೆರಳಿದ ಮದ್ಯಪ್ರಿಯ ಅದನ್ನು ಅಲ್ಲಿ ಇಟ್ಟು ದೇವರ ಗುಡಿಯ ಬಾಗಿಲು ತೆರೆದು ಕೈ ಮುಗಿದು ಬೇಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ. ಬಹಳ ದಿನಗಳ ಬಳಿಕ ಮದ್ಯದ ಪೌಚ್ ಸಿಕ್ಕಿದ ಕಾರಣ ಅಪಾರ ಖುಷಿಯಾಗಿದೆ. ಹೀಗಾಗಿ, ಇನ್ಯಾವತ್ತೂ ಈ ರೀತಿ ಆಗದಂತೆ ನೋಡಿಕೋ ಎಂದು ದೇವರಲ್ಲಿ ಬೇಡಿದ್ದಾಗಿ ಆತ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net