More

    ಮದ್ಯದ ಮತ್ತು ಅಳತೆ ಮೀರಿ ಕುಡಿದರೆ ಆಪತ್ತು: ಎಣ್ಣೆ ಸಿಕ್ಕ ಖುಷಿಗೆ ನಿಯಂತ್ರಣ ಮೀರದಿರಿ

    ಚಾಮರಾಜನಗರ: ಲಾಕ್ ಆಗಿದ್ದ ಮದ್ಯದಂಗಡಿಗಳ ಓಪನ್​ಗಾಗಿ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯುತ್ತಿದ್ದ ಮದ್ಯಪ್ರಿಯರೇ ಎಚ್ಚರ. 43 ದಿನಗಳ ಬಳಿಕ ಎಣ್ಣೆ ಸಿಗುತ್ತಿರುವ ಸಂತಸದಲ್ಲಿ ಅಳತೆ ಮೀರಿ ಕುಡಿದರೆ ಆಪತ್ತು ಸಂಭವಿಸಲಿದೆ. ಅತಿಯಾದ ವ್ಯಸನಿಗಳು ಏಕಾಏಕಿ ಮದ್ಯ ವರ್ಜಿಸುವುದರಿಂದ ಮಾನಸಿಕತೆಯಲ್ಲಿ ವ್ಯತ್ಯಾಸವಾಗುವಂತೆಯೇ ಎಣ್ಣೆ ಬಿಟ್ಟು ಹಲವು ದಿನಗಳ ಬಳಿಕ ಕಂಠಪೂರ್ತಿ ಕುಡಿದರೆ ಹೃದಯ, ಮಿದುಳು ಸೇರಿ ದೇಹದ ಇತರ ಭಾಗಗಳು ಮತ್ತು ಮಾನಸಿಕ ಆರೋಗ್ಯದ ಮೇಲೂ ನೇರ ಪರಿಣಾಮ ಬೀರಲಿದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ತುಂಬಾ ಆಸೆಯಿಂದ ವಿದೇಶ ಪ್ರವಾಸಕ್ಕೆ ಹೋಗಿದ್ದ ನವದಂಪತಿಗೆ ಹೀಗಾಗಬಾರದಿತ್ತು…

    ಮದ್ಯಪಾನ ಹಾನಿಕರವೆಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಹಾಗಿದ್ದರೂ ಮದ್ಯ ಸೇವಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಲಾಕ್​ಡೌನ್​ನಿಂದಾಗಿ ಬಂದ್ ಆಗಿದ್ದ ಮದ್ಯದಂಗಡಿಗಳು ತೆರೆದಿರುವುದರಿಂದ ಸಹಜವಾಗಿಯೇ ಮದ್ಯ ವ್ಯಸನ ಅಧಿಕಗೊಳ್ಳುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಬ್ಬರಿಗೆ ಇಂತಿಷ್ಟೇ ಪ್ರಮಾಣದಲ್ಲಿ ಮದ್ಯ ಮಾರಾಟ ಮಾಡಬೇಕೆಂದು ಆಯಾ ಜಿಲ್ಲಾಡಳಿತ ತೀರ್ವನಿಸಿದೆ. ಹಾಗಿದ್ದೂ ವಾಮಮಾರ್ಗಗಳ ಮೂಲಕ ಮದ್ಯ ಖರೀದಿಸಿ ಹೆಚ್ಚು ಸೇವಿಸಿದರೆ ಅನಾರೋಗ್ಯಕ್ಕೆ ತುತ್ತಾಗುವುದಂತೂ ಖಚಿತ. ಕರೊನಾ ಹಿನ್ನೆಲೆ ಲಾಕ್​ಡೌನ್ ಘೊಷಿಸಿರುವುದರಿಂದಾಗಿ ಸಾಂಕ್ರಾಮಿಕವಲ್ಲದ ರೋಗಗಳಿಗೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಕಡಿಮೆಯಾಗಿತ್ತು. ಮದ್ಯದಂಗಡಿ ತೆರೆದಿರುವ ಕಾರಣ ಇನ್ನುಮುಂದೆ ರೋಗಿಗಳ ಸಂಖ್ಯೆ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. ಬಹಳ ದಿನಗಳ ನಂತರ ಮದ್ಯ ಸೇವಿಸಿ ಆರೋಗ್ಯ ಸಮಸ್ಯೆ ತಂದುಕೊಂಡವರೇ ಹೆಚ್ಚಾಗಿ ಆಸ್ಪತ್ರೆಗೆ ಬರಲಿದ್ದಾರೆ ಎಂದು ಚಾಮರಾಜನಗರ ಜಿಲ್ಲಾ ಎನ್​ಸಿಡಿ ಕ್ಲಿನಿಕ್​ನ (ಜಿಲ್ಲಾಸ್ಪತ್ರೆ) ಕಾರ್ಡಿಯಾಲಜಿಸ್ಟ್ ಡಾ.ರವಿಶಂಕರ್ ತಿಳಿಸಿದ್ದಾರೆ.

    ಮಾನಸಿಕ ವ್ಯಾಧಿಗೆ ಮೂಲ ಕಾರಣ ಮದ್ಯಪಾನ. ಲಾಕ್​ಡೌನ್ ನಂತರ ಅನೇಕರು ಮದ್ಯಪಾನ ತ್ಯಜಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದ್ಯದಂಗಡಿಗಳು ಬಾಗಿಲು ತೆರೆದಿರುವುದರಿಂದ ಮತ್ತೆ ವ್ಯಸನದತ್ತ ಹೊರಳಿದರೆ ನಿಯಂತ್ರಣ ತಪ್ಪುತ್ತಾರೆ. ಆಗ ಕೌಟುಂಬಿಕ, ಕಾನೂನಾತ್ಮಕ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ವ್ಯಸನ ಮುಕ್ತರಾಗಿ ಮುಂದುವರಿಯುವುದು ಸೂಕ್ತ ಎಂದು ರಾಜ್ಯ ಮಾನಸಿಕ ಆರೋಗ್ಯ ವಿಭಾಗದ ಉಪನಿರ್ದೇಶಕಿ ಡಾ.ಪಿ.ರಜನಿ ಹೇಳಿದ್ದಾರೆ.

    ಇದನ್ನೂ ಓದಿ: ಮುಂಬೈನಿಂದ ಮಂಡ್ಯಕ್ಕೆ ತಂದ ಮೃತ ವ್ಯಕ್ತಿಗೆ ಸೋಂಕಿತ್ತೇ? ಜಿಲ್ಲಾಧಿಕಾರಿ ಹೇಳಿದ್ದೇನು?

    ಈ ಹಿಂದೆ ಸೇವಿಸುತ್ತಿದ್ದ ಮದ್ಯ ಪ್ರಮಾಣ ಲೆಕ್ಕಾಚಾರ ಹಾಕಿ, ತ್ಯಜಿಸಿದ ನಂತರವೂ ಅಷ್ಟೇ ಪ್ರಮಾಣದಲ್ಲಿ ಸೇವನೆಗೆ ಮುಂದಾದರೆ ಮಿದುಳಿನ ಸಾಮರ್ಥ್ಯ ಕುಗ್ಗಿಸುತ್ತದೆ.

    | ಪ್ರೊ.ಡಾ.ಅರುಣ್ ಮನೋವೈದ್ಯ, ನಿಮ್ಹಾನ್ಸ್- ಬೆಂಗಳೂರು

    ಎಚ್ಚರ.. ಎಚ್ಚರ..!

    ಬಹಳ ದಿನಗಳ ನಂತರ ನಿಯಂತ್ರಣ ಮೀರಿದ ಎಣ್ಣೆ ನಶೆ ಅನಿಯಮಿತ ಹೃದಯ ಬಡಿತವನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ 60-100 ಇರಬೇಕಾದ ಹಾರ್ಟ್​ರೇಟ್ ಅಧಿಕಗೊಳ್ಳುತ್ತದೆ. ಇದರಿಂದ ರಕ್ತಪರಿಚಲನಾ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ಹೃದಯ ಬಡಿತ ಏರುಪೇರಾದರೆ, ಮಿದುಳಿಗೆ ಆಮ್ಲಜನಕ ಕೊರತೆಯುಂಟಾಗಿ ಉಸಿರಾಟದ ತೊಂದರೆಯಾಗುತ್ತದೆ. ಎದೆ ಬಡಿತ ಮೀರಿದರೆ, ಮೂತ್ರಪಿಂಡದ ಮೇಲೂ ಪರಿಣಾಮ ಬೀರುತ್ತದೆ. ದುರ್ಬಲ ಹೃದಯಿಗಳು ಅಥವಾ ವಯಸ್ಸಾದವರಿಗೆ ತಕ್ಷಣದ ಹೃದ್ರೋಗ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರಕ್ತದೊತ್ತಡದಲ್ಲೂ ಏರುಪೇರು ಉಂಟಾಗಿ ನರವ್ಯೂಹ ಸಂಬಂಧಿ ಕಾಯಿಲೆಯಾದ ಪಾರ್ಶ್ವವಾಯು (ಸ್ಟ್ರೋಕ್) ಸಂಭವಿಸಲೂಬಹುದು.

    | ಕಿರಣ್ ಮಾದರಹಳ್ಳಿ 

    ಬೆಂಗಳೂರಿಗರಿಗೆ ಕರೊನಾ ಕಲಿಸುತ್ತಿದೆ ವಿಚಿತ್ರ ನೈತಿಕತೆ ಪಾಠ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts