

ಸಂಡೂರು: ಜೈ-ಭೀಮ್ ಹಾಡು ಹಾಕಿದ್ದಕ್ಕೆ ದಲಿತ ಯುವಕರ ಮೇಲೆ ಹಲ್ಲೆ ಮಾಡಿದ ರೈಲ್ವೇ ಪೊಲೀಸ್ ಪೇದೆ ಚಂದ್ರಶೇಖರ ಅವರನ್ನು ಸೇವೆಯಿಂದ ವಜಾಗೊಳಿಸಲು ಒತ್ತಾಯಿಸಿ ದೇವದಾಸಿ ವಿಮೋಚನಾ ಸಂಘ ಹಾಗೂ ದೇವದಾಸಿ ಮಕ್ಕಳ ಹೋರಾಟ ಸಮಿತಿ ಪಟ್ಟಣದ ತಹಸಿಲ್ ಕಚೇರಿಯ ಶಿರಸ್ತೇದಾರ ಕೆ.ಎಂ.ಶಿವಕುಮಾರಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:ಭೀಮಾ ಕೋರೆಗಾಂವ್ ವಿಜಯ ದಲಿತರ ಸ್ವಾಭಿಮಾನದ ಸಂಕೇತ
ದೇವದಾಸಿ ಮಹಿಳಾ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗಿಡದ ಮುದ್ದೇನಹಳ್ಳಿಯಲ್ಲಿ ವಾಹನದಲ್ಲಿ ಜೈಭೀಮ್ ಹಾಡು ಹಾಕಿದರೆಂಬ ಕಾರಣಕ್ಕೆ ದಲಿತ ಯುವಕರ ಮೇಲೆ ರೈಲ್ವೇ ಪೋಲೀಸ್ ಪೇದೆ ಚಂದ್ರಶೇಖರ ಅವರು ಮಾರಾಣಾಂತಿಕ ಹಲ್ಲೆ ನಡೆಸುವ ಮೂಲಕ ಜಾತಿ ತಾರತಮ್ಯ ಹಾಗು ದೌರ್ಜನ್ಯ ಎಸಗಿದ್ದಾರೆ.
ಕೂಡಲೆ ಪರಿಶಿಷ್ಟ ಜಾತಿ ಸಮುದಾಯದ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಿ, ಸೇವೆಯಿಂದ ವಜಾಗೊಳಿಸಬೇಕು. ಜಾತಿ ತಾರತಮ್ಯ ಹಾಗೂ ಅಸ್ಪಶಾಚರಣೆ ಅಸಹನೆಯ ಪರಾಕಾಷ್ಠೆಯಾಗಿದೆ. ಪೋಲೀಸ್ ಪೇದೆ ಕೇವಲ ದಲಿತ ಯುವಕರ ಮೇಲೆ ಹಲ್ಲೆ ನಡೆಸಿಲ್ಲ. ಡಾ.ಬಿ. ಆರ್.ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದಾರೆ. ಅವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ತೀವ್ರ ಹಲ್ಲೆಗೊಳಗಾಗಿರುವ ಯುವಕರ ಚಿಕಿತ್ಸೆ ವೆಚ್ಚ, ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.