ಆಸ್ಪತ್ರೆ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನಾ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ವಾಲಿನಿ ಶ್ರೀನಿವಾಸ್, ಹಾಪ್‌ಕಾಮ್ಸ್ ವಾಜಿ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್, ಗ್ರಾಪಂ ವಾಜಿ ಅಧ್ಯಕ್ಷ ಮುನಿಸ್ವಾಮಿ ಮತ್ತಿತರರು ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
2
Published on

ಸಂಸದರ ಬೆಂಬಲಿಗರಿಂದ ಆಕ್ರೋಶ ಸಚಿವರಿಂದ ನಂದಿಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ



ಚಿಕ್ಕಬಳ್ಳಾಪುರ: ತಾಲೂಕಿನ ನಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಸದರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಸಲಾಗಿದೆ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ನಂದಿ ಗಿರಿಧಾಮದ ತಪ್ಪಲಿನಲ್ಲಿ ಗುರುತಿಸಲಾದ ಜಾಗದಲ್ಲಿ ಆರೋಗ್ಯ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಉದ್ಘಾಟಿಸಿದ್ದು, ಇದೇ ವೇಳೆ ಸರ್ಕಾರಿ ಶಿಷ್ಟಾಚಾರದ ಉಲ್ಲಂನೆಯಾಗಿದೆ ಎಂಬ ಆಕ್ರೋಶ ವ್ಯಕ್ತವಾಯಿತು.
ಧೋರಣೆ ಸರಿಯಲ್ಲ: ಕಾರ್ಯಕ್ರಮಕ್ಕೆ ಸಂಸದ ಡಾ. ಕೆ. ಸುಧಾಕರ್ ಅವರನ್ನು ಆಹ್ವಾನಿಸಿಲ್ಲ. ಅನುದಾನ ಮಂಜೂರಾತಿ, ಅಭಿವದ್ಧಿ ಕೆಲಸ ಕೈಗೊಳ್ಳುವುದಕ್ಕೆ ಸಂಸದರು ಬೇಕು. ಉದ್ಘಾಟನೆ ಕಾರ್ಯಕ್ರಮಕ್ಕೆ ಬೇಡವೇ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಹಾಪ್‌ಕಾಮ್ಸ್ ವಾಜಿ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್ ವಾತನಾಡಿ, ಸ್ಥಳೀಯ ಸಂಸದರು, ಗ್ರಾಪಂ ಸೇರಿ ಜನಪ್ರತಿನಿಧಿಗಳನ್ನು ಶಿಷ್ಟಾಚಾರದಂತೆ ಆಹ್ವಾನಿಸಿಲ್ಲ. ನೇರವಾಗಿ ಬಂದು ನೇರವಾಗಿ ಕಾರ್ಯಕ್ರಮದಿಂದ ಹೋಗುವ ಕಾಟಾಚಾರದ ಧೋರಣೆ ತೋರಲಾಗಿದೆ ಎಂದು ಕಿಡಿಕಾರಿದರು.
ಗ್ರಾಪಂ ವಾಜಿ ಅಧ್ಯಕ್ಷ ಮುನಿಸ್ವಾಮಿ ವಾತನಾಡಿ, ಅಭಿವದ್ಧಿ ಕೆಲಸದಲ್ಲಿ ರಾಜಕೀಯ ವಾಡಬಾರದು ಎಂದು ಕಿಡಿಕಾರಿದರು. ಗ್ರಾಪಂ ಸದಸ್ಯ ಮಲ್ಲಪ್ಪ, ದಾನಿ ಗೋವಿಂದರಾಜ್ ಮತ್ತಿತರರು ಇದ್ದರು.

ದಾನಿ ಕುಟುಂಬಕ್ಕೂ ಇಲ್ಲ ಆಹ್ವಾನ
ಗ್ರಾಪಂ ಅಧ್ಯಕ್ಷೆ ವಾಲಿನಿ ಶ್ರೀನಿವಾಸ್ ವಾತನಾಡಿ, ಗ್ರಾಪಂ ವ್ಯಾಪ್ತಿಯ ಆರೋಗ್ಯ ಕೇಂದ್ರ ಉದ್ಘಾಟನೆಗೆ ನಮ್ಮನ್ನು ಕಡೆಗಣಿಸಲಾಗಿದೆ. ಸಂಜೆ ಬಂದು ಆಹ್ವಾನ ಪತ್ರಿಕೆ ಕೊಟ್ಟು, ಬಂದರೆ ಬನ್ನಿ, ಬಿಟ್ಟರೆ ಬಿಡಿ ಎನ್ನುವ ಧೋರಣೆ ಸರಿಯಲ್ಲ. ಕಟ್ಟಡ ನಿರ್ವಾಣಕ್ಕೆ ಜಾಗ ಕೊಟ್ಟ ದಾನಿ ಕುಟುಂಬದವರನ್ನೂ ಸ್ಮರಿಸದೇ ಅಗೌರವ ತೋರಲಾಗಿದೆ ಎಂದು ಆರೋಪಿಸಿದರು.

ಸಮಾಧಾನಪಡಿಸಿದ ಎಸ್‌ಪಿ
ಗ್ರಾಮದಲ್ಲಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ನೆರವೇರುತ್ತಿದೆ. ನಿಮ್ಮ ನೋವನ್ನು ಹೇಳಿಕೊಳ್ಳಬಹುದು. ಆದರೆ, ಗಲಾಟೆ ವಾಡಬಾರದು ಎಂದು ಎಸ್‌ಪಿ ಕುಶಾಲ್ ಚೌಕ್ಸೆ ಸಲಹೆ ನೀಡಿದರು. ಆದರೂ ಅಸವಾಧಾನಿತರು ಆಕ್ರೋಶದಲ್ಲಿ ಹೊರ ನಡೆದರು.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಕಾಡುತ್ತಿದೆ ಸಣ್ಣತನ

ಚಿಕ್ಕಬಳ್ಳಾಪುರ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ಸಣ್ಣತನ ಕಾಡುತ್ತಿದೆ ಎಂದು ಸಂಸದ ಡಾ ಕೆ.ಸುಧಾಕರ್ ಕಿಡಿಕಾರಿದ್ದಾರೆ.
ಜಿಲ್ಲೆಗೆ ಹೊಸ ಯೋಜನೆಗಳನ್ನು ತರುವುದು ದೂರದ ವಾತು. ಇದರ ನಡುವೆ ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದ ಯೋಜನಗೆಳನ್ನು ಪೂರ್ಣಗೊಳಿಸಿದ್ದು, ಇವುಗಳನ್ನು ಶಿಷ್ಟಾಚಾರದಂತೆ ಉದ್ಘಾಟಿಸುವ ಯೋಗ್ಯತೆ ಕಾಂಗ್ರೆಸ್ ಸರ್ಕಾರ ಇಲ್ಲವೇ ಆರೋಗ್ಯ ಸಚಿವರಿಗಾಗಲಿ ಇಲ್ಲ ಎಂದು ಕಿಡಿಕಾರಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವನಾಗಿದ್ದಾಗ ಜಿಲ್ಲೆಯ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಟ್ಟ, ಮಂಚೇನಹಳ್ಳಿಯ ತಾಲೂಕುಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ 673.65 ಕೋಟಿ ರೂ. ವೆಚ್ಚದ 46 ವಿವಿಧ ಅಭಿವದ್ಧಿ ಕಾಮಗಾರಿಗಳಿಗೆ ಮಂಜೂರಾತಿ ಕೊಡಿಸಿ, ವಿವಿಧ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಇದರ ಕೀರ್ತಿ ಸಂಸದರಿಗೆ ಬರುತ್ತದೆ ಎಂಬ ಭಾವನೆಯಲ್ಲಿ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರು ಸಣ್ಣತನ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net