ವಿಮುಕ್ತ ದೇವದಾಸಿಯರಿಗೆ ನ್ಯಾಯ ಕೊಡಿಸಿ

19SND-02
ಸಿಂಧನೂರಿನ ತಹಸಿಲ್ ಕಚೇರಿ ಶಿರಸ್ತೇದಾರ್ ಶಿವಾನಂದ ಪೂಜಾರಿಗೆ ಪ್ರಜಾ ಜಾಗೃತಿ ಸಂಘಟನೆ ತಾಲೂಕು ಸಮಿತಿ ಬುಧವಾರ ಮನವಿ ಸಲ್ಲಿಸಿತು. ಸಮಿತಿ ಗೌರವಾಧ್ಯಕ್ಷ ಜಾನಪ್ಪ ಜವಳಗೇರಾ, ಅಧ್ಯಕ್ಷ ಎಚ್.ಜಗದೀಶ ವಕೀಲ, ಗಂಗಮ್ಮ, ಆಲ್ಮಮ್ಮ, ಕನಕಮ್ಮ ಇತರರಿದ್ದರು.
Published on

ಸಿಂಧನೂರು: ತಾಲೂಕಿನ ದಢೇಸುಗೂರಿನಲ್ಲಿ ವಿಮುಕ್ತ ದೇವದಾಸಿಯರಿಗೆ ಹಂಚಿಕೆ ಮಾಡಿದ್ದ ಭೂಮಿಯನ್ನು ಅಕ್ರಮವಾಗಿ ಪಡೆದಿರುವ ಮಾಜಿ ಶಾಸಕ ಬಸವರಾಜ ದಢೇಸುಗೂರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರಜಾ ಜಾಗೃತಿ ಸಂಘಟನೆ ತಾಲೂಕು ಸಮಿತಿ ಬುಧವಾರ ತಹಸಿಲ್ ಕಚೇರಿ ಶಿರಸ್ತೇದಾರ್ ಶಿವಾನಂದ ಪೂಜಾರಿಗೆ ಮನವಿ ಸಲ್ಲಿಸಿತು.

ಗ್ರಾಮದಲ್ಲಿ ಸರ್ಕಾರದಿಂದ 1990-91ರಲ್ಲಿ ಸುಮಾರು 80 ಎಕರೆ ವಿಸ್ತೀರ್ಣ ಹೊಂದಿದ ಜಮೀನುಗಳನ್ನು ದೇವದಾಸಿ ಪುನರ್ವಸತಿ ಯೋಜನೆಯಡಿ ಶ್ರೇಯೋಭಿವೃದ್ಧಿಗೆ ಆರ್ಥಿಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವಿಮುಕ್ತ ದೇವದಾಸಿಯರಿಗೆ ಹಂಚಿಕೆ ಮಾಡಲಾಗಿತ್ತು. ಸಾಲಗುಂದ ಹೋಬಳಿ ವ್ಯಾಪ್ತಿಯಲ್ಲಿ 30 ಎಕರೆ ಜಮೀನನ್ನು ಕಬ್ಜಾ ಮಾಡಿಕೊಂಡು ಅನ್ಯಾಯ ಮಾಡಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ, ಅನ್ಯಾಯ ಸರಿಪಡಿಸಬೇಕೆಂದು ಒತ್ತಾಯಿಸಿದರು.

ಸಮಿತಿ ಗೌರವಾಧ್ಯಕ್ಷ ಜಾನಪ್ಪ ಜವಳಗೇರಾ, ಅಧ್ಯಕ್ಷ ಎಚ್.ಜಗದೀಶ ವಕೀಲ, ಕಾರ್ಯದರ್ಶಿ ಶ್ರೀನಿವಾಸ ವೈ., ಸಹ ಕಾರ್ಯದರ್ಶಿ ಬಸವರಾಜ, ಪ್ರಮುಖರಾದ ಗಂಗಮ್ಮ, ಆಲ್ಮಮ್ಮ, ಕನಕಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net