ಗ್ರಾಪಂ ಎದುರು ಗುಡೂರ ಗ್ರಾಮಸ್ಥರ ಪ್ರತಿಭಟನೆ

11-hvr-04
Published on

ಹಾವೇರಿ: ವಾಟರ್​ವುನ್ ಬದಲಾವಣೆ ಮಾಡುವಂತೆ ಒತ್ತಾಯಿಸಿ ಗುಡೂರ ಗ್ರಾಮಸ್ಥರು ಮರೋಳ ಗ್ರಾಪಂ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಮರೋಳ ಗ್ರಾಪಂ ವ್ಯಾಪ್ತಿಯ ಗುಡೂರ ಗ್ರಾಮದ ವಾಟರ್​ವುನ್ ಖಾನಗೌಡ ಪಾಟೀಲನನ್ನು ಬದಲಾಯಿಸಿ ಎಂದು ಗುಡೂರ ಗ್ರಾಮಸ್ಥರು ಮಂಗಳವಾರ ಗ್ರಾಪಂ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದರು. ಕಾರ್ಯದರ್ಶಿ ಪ್ರಕಾಶ ಅಕ್ಕಿ ಗ್ರಾಮಸ್ಥರ ಮನವಿ ಸ್ವೀಕರಿಸಿ ಎರಡು ದಿನ ಬಿಟ್ಟು ಬನ್ನಿ ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದ್ದರಂತೆ. ಅದರಂತೆ ಗ್ರಾಮಸ್ಥರು ಶುಕ್ರವಾರ ಗ್ರಾಪಂಗೆ ಬಂದಿದ್ದಾರೆ. ಆದರೆ, ಪಿಡಿಒ ಹಾಗೂ ಕಾರ್ಯದರ್ಶಿ ಪಂಚಾಯಿತಿಯಲ್ಲಿ ಇರದೇ ಇದ್ದರಿಂದ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಶಂಕರ ಕಂಬಳಿ, ಕೃಷ್ಣಪ್ಪ ಡೊಳ್ಳಿನ, ಕೊಟೇಪ್ಪ ಕಂಬಳಿ, ರಮೇಶ ಸಿದ್ದಾಪುರ, ಎಂ.ಕೆ. ಹೂಗಾರ, ಕುಬೇರ ಹುಚ್ಚಮ್ಮನವರ, ಪ್ರಕಾಶ ಗಡ್ಡದ, ಪರಸಪ್ಪ ಮೈಲಾರಿ, ನಿಂಗಪ್ಪ ಗಡ್ಡದ ಇತರರಿದ್ದರು.

ಏನಿದು ಸಮಸ್ಯೆ: ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಖಾನಗೌಡ ಪಾಟೀಲ ತನ್ನ ಕೆಲಸ ನಿರ್ವಹಿಸದೆ, ಗ್ರಾಪಂ ಅಧಿಕಾರಿಯಂತೆ ವರ್ತಿಸುತ್ತಾನೆ. ಗ್ರಾಪಂನಿಂದ ಬರುವ ಯಾವುದೇ ಮಾಹಿತಿಯನ್ನು ಗ್ರಾಮಸ್ಥರಿಗೆ ತಿಳಿಸುವುದಿಲ್ಲ. ಕೇವಲ ತನ್ನ ಆಪ್ತ ವಲಯಕ್ಕೆ ಮಾತ್ರ ತಿಳಿಸಿ ಸುಮ್ಮನಾಗುತ್ತಾನೆ. ಇನ್ನೂ ಗ್ರಾಮಸ್ಥರಿಗೆ ಮಂಜೂರಾದ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಮಧ್ಯಸ್ಥಿಕೆ ವಹಿಸುತ್ತಾನೆ. ಹೀಗಾಗಿ ಇವನನ್ನು ಬದಲಾಯಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

ಗುಡೂರ ಗ್ರಾಮದ ವಾಟರ್​ವುನ್ ಖಾನಗೌಡ ಪಾಟೀಲ ತನಗೆ ಸಂಬಂಧಿಸದ ಕಾರ್ಯಗಳಲ್ಲಿ ಭಾಗವಹಿಸಲು ಮುಂಚೂಣಿಯಲ್ಲಿರುತ್ತಾನೆ. ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿಲ್ಲ. ಇದನ್ನು ಕೇಳುವವರಿಗೆ ಉಡಾಫೆ ಮಾತನಾಡುತ್ತಾನೆ. ಆದ್ದರಿಂದ ಈತನನ್ನು ಬದಲಾವಣೆ ಮಾಡಬೇಕು.| ಕರಿಯಲ್ಲಪ್ಪ ಹೊಟ್ತಿ, ಗುಡೂರ ಗ್ರಾಮಸ್ಥಸೂಕ್ತವಾದ ಆರೋಪವಿಲ್ಲದೇ ಸಿಬ್ಬಂದಿ ಬದಲಾಯಿಸುವ ಅಧಿಕಾರ ನಮಗಿಲ್ಲ. ಈಗಾಗಲೇ ಗ್ರಾಪಂ ಅಧಿಕಾರಾವಧಿ ಮುಗಿದಿದ್ದು. ಹೊಸ ಸಮಿತಿ ರಚನೆಯಾದ ಮೇಲೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು.| ಪ್ರಕಾಶ ಅಕ್ಕಿ, ಕಾರ್ಯದರ್ಶಿ ಗ್ರಾಪಂ ಮರೋಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net